ಮಾ. 2ರಂದು ತೋಡಾರು ಮುಖಾಂ ಉರೂಸ್

Update: 2019-02-15 13:25 GMT

ಮೂಡುಬಿದಿರೆ, ಫೆ. 15: ಸಯ್ಯದ್ ವಲಿಯುಲ್ಲಾಹಿ (ಖ.ಸಿ) ಹೆಸರಿನಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ತೋಡಾರು ಮುಖಾಂ ಉರೂಸ್ ಫೆ.22 ರಿಂದ ಮಾರ್ಚ್ 2ರ ತನಕ ನಡೆಯಲಿದೆ ಎಂದು ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಮಿಜಾರು ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತೋಡಾರು ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲೀಂ ಫೈಝಿ ಅಧ್ಯಕ್ಷತೆಯಲ್ಲಿ ಧಾರ್ಮಿಕ  ಕಾರ್ಯಕ್ರಮ ನಡೆಯಲಿದ್ದು, ಫೆ.22 ರಂದು ಧ್ವಜಾರೋಹಣದೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸ್ವಲಾತ್ ವಾರ್ಷಿಕ ನೇತೃತ್ವವನ್ನು ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇರವೇರಿಸಲಿದ್ದು, ಫೆ. 23 ರಂದು ಅಸರ್ ನಮಾಝ್ ನಂತರ ನಡೆಯುವ ಮಜ್ಲಿಸುನ್ನೂರು ವಿಶೇಷ ದುವಾ ನೇತೃತ್ವವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಶೈಖುನಾ ಅಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಭಾಗವಹಿಸಲಿರುವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಲ್ಯಾಸ್ ಅರ್ಶದಿ ಅತೂರು,  ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ,  ಅನ್ವರ್ ಮುಹಿಯುದ್ದೀನ್ ಹುದವಿ ಅಲುವಾ, ಖಲೀಲುರ್ರಹಮಾನ್ ದಾರಿಮಿ,  ಅಶ್ರಫ್ ಫೈಝಿ ಕೊಡಗು, ಅಬೂಝಿಯಾನ್ ಝುಹೈರಿ ಅಝ್ಝರಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಬಶೀರಲಿ  ಶಿಹಾಬ್ ತಂಙಳ್ ಪಾಣಕ್ಕಾಡ್, ಅಬೂಬಕ್ಕರ್ ಮುಸ್ಲಿಯಾರ್ ಖಾಝಿ ಅತ್ರಾಡಿ, ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್,  ಸಂಸದ ನಳಿನ್ ಕುಮಾರ್ ಕಟೀಲ್,  ಶಾಸಕ ಉಮನಾಥ ಕೋಟ್ಯಾನ್, ವಿಧಾನ ಪರಿಷತ್‍ನ ಸದಸ್ಯ ಭೋಜೇಗೌಡ ಹಾಗೂ ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಎಂ.ಎಲ್.ಸಿ. ಐವನ್ ಡಿಸೋಜ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಮಾಜಿ ಸಚಿವ ಬಿ.ರಮನಾಥ ರೈ, ವಿಧಾನ ಪರಿಷತ್‍ನ ಸದಸ್ಯ ಬಿ.ಎಂ. ಫಾರೂಕ್, ಮಾಜಿ ಸಚಿವ ಅಭಯಚಂದ್ರ ಜೈನ್, ವೈ. ಮಹಮ್ಮದ್ ಬ್ಯಾರಿ ಎಡಪದವು, ಬಿ.ಎಚ್. ಅಬ್ದುಲ್ ಖಾದರ್ ಹಾಗೂ ಇನ್ನಿತರ ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು ಭಾಗವಹಿಸಲಿರುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಸ್ಸಲಾಂ ಬೂಟ್ ಬಜಾರ್, ಉಪಾಧ್ಯಕ್ಷ ಮೊಯ್ದಿನ್ ಬಾವ ಮಿಜಾರು, ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು, ಉರೂಸ್ ಸಮಿತಿ ಅಧ್ಯಕ್ಷ ಎಮ್.ಎ.ಎಸ್ ಆಸಿಫ್ ತೋಡಾರು, ಉಪಾಧ್ಯಕ್ಷ ಶರೀಫ್ ಝಕರಿಯ್ಯ, ಎಂ.ಎ. ರಝಾಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News