ಮಂಗಳೂರು: ಟಾಟಾ ಹೊಸ ವಿಂಗರ್‌ ಮಾರುಕಟ್ಟೆಗೆ

Update: 2019-02-15 13:35 GMT

ಮಂಗಳೂರು, ಫೆ. 15 : ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆ ಟಾಟಾ ಮೋಟರ್ಸ್ ತನ್ನ ನೂತನ ಉತ್ಪನ್ನಗಳಾದ “ವಿಂಗರ್ 12 ಸೀಟರ್” ಮತ್ತು “ವಿಂಗರ್ 15 ಸೀಟರ್” ಮಾನೋಕಾಕ್ ವಿನ್ಯಾಸದ ವಾಹನಗಳನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಿತು.

ಅಪರೇಟರ್‌ ಹೂಡುವ ಹಣಕ್ಕೆ ದೀರ್ಘಕಾಲಿಕ ಮೌಲ್ಯದೊಂದಿಗೆ ಪ್ರಯಾಣಿಕರಗೆ ಆರಾಮ ಪ್ರಯಾಣದ ವಿಶಿಷ್ಟ, ಸೌಕರ್ಯ ಒದಗಿಸುವ ರೀತಿ ಈ ವಾಹನಗಳನ್ನು ವಿನ್ಯಾಸ ಪಡಿಸಲಾಗಿದೆ.

ವಿ.15 ಆಸನ ಬೆಲೆ 12.90 ಲಕ್ಷ ರೂ. ದಿಂದ ಆರಂಭವಾದರೆ ವಿ.12 ಆಸನದ ಬೆಲೆ 13.76 ಲಕ್ಷದಿಂದ ಆರಂಭವಾಗುತ್ತದೆ. ಎರಡೂ ಮಾದರಿಯ ವಾಹನಗಳು ಮಂಗಳೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ 16 ಟಾಟಾ ಮೋಟರ್ಸ್ ಅಧಿಕೃತ ಡೀಲರಲ್ಲಿ ಲಭ್ಯವಿರುತ್ತದೆ ಎಂದು ಟಾಟಾ ಮೋಟರ್ಸ್‍ನ ಪ್ರಯಾಣಿಕ ವಾಣಿಜ್ಯ ವಾಹನ ವ್ಯಾಪಾರ ಘಟಕದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥರಾದ ಸಂದೀಪ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News