ಉಡುಪಿ: ವಿವಿಧ ಬೇಡಿಕೆಗಾಗಿ ಜೀವವಿಮಾ ಪ್ರತಿನಿಧಿಗಳಿಂದ ಧರಣಿ

Update: 2019-02-15 14:20 GMT

ಉಡುಪಿ, ಫೆ.15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಫೆಡರೇಶನ್(ಲಿಯಾಫಿ) ಉಡುಪಿ ವಿಭಾಗದ ವತಿಯಿಂದ ಶುಕ್ರವಾರ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಐಆರ್‌ಡಿಎ ನಿಯಮಾವಳಿಯಂತೆ ಪ್ರತಿನಿಧಿಗಳಿಗೆ ಗರಿಷ್ಠ ಕಮಿಷನ್ ನೀಡ ಬೇಕು. ಪಾಲಿಸಿಗಳ ಮೇಲಿನ ಬೋನಸ್ ದರವನ್ನು ಹೆಚ್ಚಿಸಬೇಕು. ಪ್ರೀಮಿಯಂ ಸಂಗ್ರಹಕ್ಕೆ ಹೆಚ್ಚುವರಿ ಕಮಿಷನ್ ನೀಡಲೇಬೆಕು. ಪ್ರತಿನಿಧಿಗಳ ಕ್ಷೇಮನಿಧಿ ಸ್ಥಾಪಿಸ ಬೇಕು. ಪ್ರತಿನಿಧಿಗಳ ಗ್ರಾಟ್ಯುಟಿ ಮೊತ್ತವನ್ನು 20ಲಕ್ಷ ರೂ.ಗೆ ಏರಿಸಬೇಕು. ಪ್ರತಿನಿಧಿಗಳಿಗೂ ಇಎಸ್‌ಐ ಸೌಲಭ್ಯವನ್ನು ಒದಗಿಸಬೇಕು. ಪ್ರತಿನಿಧಿಗಳಿಗೆ ಗುಂಪು ವಿಮೆಯನ್ನು ನೀಡಬೇಕು ಮತ್ತು ಅದನ್ನು 80ವರ್ಷಗಳವರೆಗೆ ವಿಸ್ತರಿಸಬೇಕು. ನೇರ ಮತ್ತು ಕ್ಯಾರಿಯರ್ ಏಜೆಂಟ್ಸ್‌ಗೆ ಹೆಚ್ಚಿನ ಸೌಲಭ್ಯ ಗಳನ್ನು ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಮೆಡಿಕ್ಲೈಮ್ ಸೌಲಭ್ಯವನ್ನು ಎಲ್ಲ ಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬ ಗಳಿಗೆ ಒದಗಿಸಬೇಕು. ಶೇ.5.5 ಬಡ್ಡಿದರದಲ್ಲಿ ಗರಿಷ್ಠ ಗೃಹಸಾಲ ನೀಡಬೇಕು. ಪ್ರತಿನಿಧಿಗಳ ಮುಂಗಡಗಳಿಗೆ ಕಳೆದ ಐದು ವರ್ಷ ಗಳ ಗಳಿಕೆಯನ್ನು ಪರಿಗಣಿಸ ಬೇಕು. ಪ್ರತಿನಿಧಿಗಳ ಮಕ್ಕಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸಬೇಕು. ನೂತನ ಪ್ರತಿನಿಧಿಗಳಿಗೆ ಸ್ಟೈಫಂಡ್ ನೀಡಬೇಕು. ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಬೇಕು. ಸಂವರ್ಧನ್ ಪಿಂಚಣಿ ಸೌಲಭ್ಯವನ್ನು ಮುಂದುವರೆಸ ಬೇಕು. ಎಲ್ಲ ಶಾಖಾ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪ್ರತಿನಿಧಿ ಗಳಿಗೆ ಇಂಟರ್‌ನೆಟ್ ವೆಚ್ಚವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಧರಣಿಯಲ್ಲಿ ಲಿಯಾಫಿ ಉಡುಪಿ ವಿಭಾಗೀಯ ಮಂಡಳಿಯ ಅಧ್ಯಕ್ಷ ಶೇಖರ್ ಬಿ.ಪೂಜಾರಿ, ಪ್ರಧಾನ ಕಾರ್ಯದರ್ಶಿ ಕಾಶೀನಾಥ್ ಪುತ್ರನ್, ಮಾಜಿ ಅಧ್ಯಕ್ಷ ಮುರಳೀಧರ್ ತಂತ್ರಿ, ದಕ್ಷಿಣ ಕೇಂದ್ರದ ವಿಭಾಗೀಯ ಮಂಡಳಿಯ ಕಾರ್ಯದರ್ಶಿ ಲೀಲಾವತಿ ಕೆ., ಎಲ್ಲೈಸಿ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಆಚಾರ್ಯ, ಕೋಶಾಧಿಕಾರಿ ಮುರಳಿ ವೈ. ಶೇರಿಗಾರ್ ೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News