ಭಯೋತ್ಪಾದಕ ದಾಳಿಗೆ ಜಾಗತಿಕ ಖಂಡನೆ

Update: 2019-02-15 14:48 GMT

ವಾಶಿಂಗ್ಟನ್, ಫೆ. 15:, ರಶ್ಯ, ಅಮೆರಿಕ, ಚೀನಾ ಸೇರಿದಂತೆ ಜಗತ್ತಿನಾದ್ಯಂತದ ಹಲವಾರು ದೇಶಗಳು, ಸಿಆರ್‌ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ನಡೆಸಿದ ಭೀಕರ ದಾಳಿಯನ್ನು ಖಂಡಿಸಿವೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಅಪರಾಹ್ನ ನಡೆದ ದಾಳಿಯಲ್ಲಿ ಕನಿಷ್ಠ 41 ಭಾರತೀಯ ಯೋಧರು ಹತಾತ್ಮರಾಗಿದ್ದಾರೆ.

2,500ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರನ್ನು ಸಾಗಿಸುತ್ತಿದ್ದ ವಾಹನಗಳ ಸಾಲನ್ನು ಗುರಿಯಾಗಿಸಿ ಆತ್ಮಹತ್ಯಾ ಕಾರ್‌ಬಾಂಬ್ ದಾಳಿ ನಡೆಸಲಾಗಿತ್ತು.

‘‘ಇಂಥ ಅಮಾನವೀಯ ಕೃತ್ಯಗಳನ್ನು ಯಾವುದೇ ದ್ವಿಮುಖ ಧೋರಣೆಯಿಲ್ಲದೆ ನಿರ್ಣಾಯಕವಾಗಿ ಹಾಗೂ ಸಾಮೂಹಿಕವಾಗಿ ಎದುರಿಸಬೇಕು’’ ಎಂದು ರಶ್ಯ ಹೇಳಿದೆ.

‘‘ಭಯೋತ್ಪಾದನೆಯನ್ನು ಅದರ ಎಲ್ಲ ರೂಪಗಳಲ್ಲಿ ಹಾಗೂ ವಿಧಗಳಲ್ಲಿ ವಿರೋಧಿಸುತ್ತೇವೆ ಹಾಗೂ ಈ ಅಮಾನವೀಯ ಕೃತ್ಯಗಳನ್ನು ನಿರ್ಣಾಯಕವಾಗಿ ಎದುರಿಸಬೇಕಾದ ಅಗತ್ಯವಿದೆ’’ ಎಂದು ರಶ್ಯ ರಾಯಭಾರ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News