ಉಗ್ರರಿಗೆ ‘ಸುರಕ್ಷಿತ ಆಶ್ರಯ ತಾಣ’ ನಿಲ್ಲಿಸಿ: ಪಾಕ್‌ ಗೆ ಅಮೆರಿಕ ಕರೆ

Update: 2019-02-15 14:51 GMT

ವಾಶಿಂಗ್ಟನ್, ಫೆ. 15: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅಮೆರಿಕ ಪ್ರಬಲವಾಗಿ ಖಂಡಿಸಿದೆ ಹಾಗೂ ಭಯೋತ್ಪಾದಕ ಗುಂಪುಗಳಿಗೆ ‘ಸುರಕ್ಷಿತ ಆಶ್ರಯ ತಾಣ’ ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ಅದು ಪಾಕಿಸ್ತಾನವನ್ನು ಒತ್ತಾಯಿಸಿದೆ.

‘‘ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ನೀಡುತ್ತಿರುವ ಸುರಕ್ಷಿತ ಆಶ್ರಯ ತಾಣವನ್ನು ಮತ್ತು ಬೆಂಬಲವನ್ನು ತಕ್ಷಣ ನಿಲ್ಲಿಸುವಂತೆ ಅಮೆರಿಕವು ಆ ದೇಶಕ್ಕೆ ಕರೆ ನೀಡುತ್ತದೆ. ಈ ಭಯೋತ್ಪಾದಕರ ಏಕೈಕ ಉದ್ದೇಶ ಈ ವಲಯದಲ್ಲಿ ಗಲಭೆ, ಹಿಂಸೆ ಮತ್ತು ಭಯವನ್ನು ಬಿತ್ತುವುದು’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಗುರುವಾರ ತಡ ರಾತ್ರಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಈ ದಾಳಿಯು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ತ್ವರಿತಗೊಳಿಸುವ ಹಾಗೂ ಅಮೆರಿಕ ಮತ್ತು ಭಾರತ ದೇಶಗಳ ನಡುವಿನ ಸಹಕಾರ ಮತ್ತು ಸಮನ್ವಯವನ್ನು ವೃದ್ಧಿಸುವ ನಮ್ಮ ನಿರ್ಧಾರವನ್ನು ಬಲಗೊಳಿಸಿದೆ’’ ಎಂದು ಕಟುಮಾತುಗಳ ಹೇಳಿಕೆಯಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News