ಡೋಪಿಂಗ್ ಪರೀಕ್ಷೆಯಲ್ಲಿ ಯುವ ಟೆನಿಸ್ ಆಟಗಾರ ಆರ್ಯನ್ ಅನುತ್ತೀರ್ಣ

Update: 2019-02-15 18:06 GMT

ಹೊಸದಿಲ್ಲಿ, ಫೆ.15: ಆರ್ಯನ್ ಭಾಟಿಯಾ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ಭಾರತದ ಮೊದಲ ಟೆನಿಸ್ ಆಟಗಾರನಾಗಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಸಲಾಗಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ದಳ(ನಾಡಾ)ಶುಕ್ರವಾರ ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್‌ನ ವೇಳೆ 16ರ ಹರೆಯದ ಭಾಟಿಯಾರ ಮೂತ್ರ ಮಾದರಿ ಸಂಗ್ರಹಿಸಲಾಗಿತ್ತು. ನಾಡಾ ಚಾಂಪಿಯನ್‌ಶಿಪ್ ವೇಳೆ ಮೊದಲ ಬಾರಿ ಟೆನಿಸ್ ಆಟಗಾರರಿಂದ ಸ್ಯಾಂಪಲ್‌ನ್ನು ಪಡೆದಿತ್ತು. ಇದು ನಿರ್ಲಕ್ಷ್ಯದ ಪ್ರಕರಣವಾಗಿದೆ, ತಪ್ಪು ನಡೆದುಹೋಗಿದೆ. ಆಟಗಾರನಿಗೆ ಶೀತವಾಗಿತ್ತು. ಹೀಗಾಗಿ ಆತ ವೈದ್ಯರು ಬರೆದುಕೊಟ್ಟ ಔಷಧವನ್ನು ಸೇವಿಸಿದ್ದ. ಔಷಧದಲ್ಲಿ ನಿಷೇದಿತ ರಾಸಾಯನಿಕ ಇರುವುದು ಆತನಿಗೆ ಗೊತ್ತಿರಲಿಲ್ಲ. ಆರ್ಯನ್ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದು ಅದನ್ನು ಶೀಘ್ರವೇ ವಿಚಾರಣೆ ನಡೆಸಲಾಗುವುದುೞೞಎಮದು ಅಖಿಲ ಭಾರತ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News