ಟರ್ಕಿ ಮಹಿಳಾ ವಿಶ್ವಕಪ್ ಫುಟ್ಬಾಲ್‌ನಲ್ಲಿ ಭಾರತ ಭಾಗಿ

Update: 2019-02-15 18:07 GMT

ಹೊಸದಿಲ್ಲಿ, ಫೆ.15: ಭಾರತೀಯ ಹಿರಿಯ ಮಹಿಳಾ ಫುಟ್ಬಾಲ್ ತಂಡ ಫೆ.27ರಿಂದ ಆರಂಭವಾಗಲಿರುವ ಟರ್ಕಿಶ್ ಮಹಿಳಾ ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ.

ಭಾರತ ಱಎೞಗುಂಪಿನಲ್ಲಿ ರೋಮೆನಿಯಾ, ಉಝ್ಬೇಕಿಸ್ತಾನ ಹಾಗೂ ತುರ್ಕ್‌ಮೆನಿಸ್ತಾನ ತಂಡದೊಂದಿಗೆ ಸ್ಥಾನ ಪಡೆದಿದೆ. ಱಬಿೞಗುಂಪಿನಲ್ಲಿ ಫ್ರಾನ್ಸ್(ಬಿ), ಜೋರ್ಡಾನ್, ನಾರ್ಥನ್ ಐರ್ಲೆಂಡ್ ಹಾಗೂ ಆತಿಥೇಯ ಟರ್ಕಿ ತಂಡಗಳಿವೆ. ಪ್ರತಿ ತಂಡ ಗುಂಪು ಹಂತದಲ್ಲಿ ತಲಾ ಒಂದು ಬಾರಿ ಆಡಲಿವೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಫೈನಲ್‌ಗೆ ತಲುಪಲಿದೆ. 3ನೇ ಹಾಗೂ 4ನೇ ಸ್ಥಾನ, 5ನೇ ಹಾಗೂ 6ನೇ ಹಾಗೂ 7ನೇ ಹಾಗೂ 8ನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ. ಭಾರತಕ್ಕೆ ಈ ಟೂರ್ನಿಯು ಎಎಫ್‌ಸಿ ಒಲಿಂಪಿಕ್ಸ್ ಕ್ವಾಲಿಫೈಯರ್ ರೌಂಡ್-2 ಹಾಗೂ ಸ್ಯಾಫ್ ಮಹಿಳಾ ಚಾಂಪಿಯನ್‌ಶಿಪ್‌ಗೆ ಪೂರ್ವ ತಯಾರಿ ಎನಿಸಿದೆ.

ಭಾರತ ಫೆ.20ರಂದು ಟರ್ಕಿಗೆ ತೆರಳಲಿದ್ದು, ಫೆ.27 ರಂದು ಉಝ್ಬೆಕಿಸ್ತಾನ ಎದುರು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News