ಯೋಧರ ಹತ್ಯೆ: ಜಮಾಅತೆ ಇಸ್ಲಾಮಿ ಹಿಂದ್, ಮುಸ್ಲಿಂ ಜಮಾಅತ್, ಎಸ್‌ಜೆಎಂ ಖಂಡನೆ

Update: 2019-02-16 13:11 GMT

ಉಡುಪಿ, ಫೆ.16: ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಸಮಿತಿ ಹಾಗೂ ಕಾಪು ಸ್ಥಾನೀಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕೃತ್ಯವು ರಾಜಕೀಯ ಹಿತಾಸಕ್ತಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಮತ್ತು ಕೃತ್ಯದ ಹಿಂದಿರುವವರು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ತಡೆಯ ಬೇಕಾಗದೆ. ಈ ಹತ್ಯೆಯು ಮಾನವೀಯತೆ ಮೇಲಿನ ಹತ್ಯೆಯಾಗಿದೆ ಎಂದು ಜಿಲ್ಲಾ ಸಂಚಾಲಕ ಎಂ.ಶಬ್ಬಿರ್ ಮಲ್ಪೆ ಹಾಗೂ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಮುಸ್ಲಿಂ ಜಮಾಅತ್ ಖಂಡನೆ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ತೀವ್ರವಾಗಿ ಖಂಡಿಸಿದೆ.

ಅಮಾನುಷ ಕೃತ್ಯ ಎಸಗಿರುವ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಬೇಕು. ಭೀಕರ ಕೃತ್ಯವನ್ನು ಯಾರೇ ಮಾಡಿದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನೈಜ ಭಯೋತ್ಪಾದಕರನ್ನು ಸದೆಬಡಿಯಬೇಕು ಎಂದು ಜಮಾಅತ್ ಸಂಚಾಲಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಒತ್ತಾಯಿಸಿದ್ದಾರೆ.

ಎಸ್‌ಜೆಎಂ ಖಂಡನೆ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಸುನ್ನಿ ಜಂಇಯ್ಯತಿಲ್ ಮುಅಲ್ಲಿಮೀನ್ ಉಡುಪಿ ರೇಂಜ್ ಅಧ್ಯಕ್ಷ ಬಶಿೀರ್ ಮದನಿ ಕಟಪಾಡಿ ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News