ಹಕ್ಕುಪತ್ರದ ಮೂಲಕ ಬದುಕಿಗೆ ಭದ್ರತೆ ಸಿಗುತ್ತಿದೆ: ಸಚಿವ ಯು.ಟಿ.ಖಾದರ್

Update: 2019-02-16 13:16 GMT

ಕೊಣಾಜೆ, ಫೆ. 16: ಕಳೆದ ಹಲವಾರು ವರ್ಷಗಳಿಂದ ವಾಸವಾಗಿದ್ದರೂ ಹಕ್ಕು ಪತ್ರ ಇಲ್ಲದೆ ಜನರು ತೊಂದರೆಯನ್ನು ಎದುರಿಸುತ್ತಿದ್ದರು. ಇದೀಗ ಹಲವಾರು ವರ್ಷಗಳಿಂದ ಒಂದೇ ಕಡೆ ವಾಸವಾಗಿರುವ ಮನೆಗಳಿಗೆ ಭದ್ರತೆ ನೀಡುವ ಸರ್ಕಾರದ ಯೋಜನೆಯಂತೆ ಮಂಗಳೂರು ಕ್ಷೇತ್ರದಲ್ಲಿ ಕಳೆದ ವರ್ಷ ಹತ್ತು ಸಾವಿರ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಅವರು ಹೇಳಿದರು.

ಕಂದಾಯ ಇಲಾಖೆ ಹಾಗೂ ಕೊಣಾಜೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅಸೈಗೋಳಿಯಲ್ಲಿ ಶನಿವಾರ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಜನಪ್ರತಿನಿಧಿಗಳಿಗೆ ಮತ ಕೊಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಜನಪ್ರತಿನಿಧಿಗಳು ಮಾಡಿದ ಉತ್ತಮ ಕಾರ್ಯವನ್ನು ಜನರು ಖಂಡಿತಾವಾಗಿಯೂ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ತಾ.ಪಂ.ಸದಸ್ಯೆ ಸುರೇಖ ಚಂದ್ರಹಾಸ, ಪದ್ಮಾವತಿ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಣಾಜೆ, ಉಪಾಧ್ಯಕ್ಷ ಮುಸ್ತಫಾ ಮಲಾರ್, ಸಂಘಟನಾ ಕಾರ್ಯದರ್ಶಿ ಮೇಗಾ ಸಲೀಂ, ದೇವಣ್ಣ ಶೆಟ್ಟಿ, ಶೌಕತ್ ಆಲಿ, ಎನ್.ಎಸ್. ಕರೀಂ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಮಂಜನಾಡಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್, ಕಂದಾಯ ಇಲಾಖೆಯ ಸ್ಟೀಪನ್, ಕೊಣಾಜೆ ಪಂಚಾಯಿತಿ ಗ್ರಾಮ ಲೆಕ್ಕಿಗರಾದ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News