ಕಾಶ್ಮೀರದಲ್ಲಿ ಪ್ರವಾಸದಲ್ಲಿರುವ ಪ್ರಜೆಗಳಿಗೆ ಬ್ರಿಟನ್ ಎಚ್ಚರಿಕೆ

Update: 2019-02-16 16:16 GMT

ಲಂಡನ್, ಫೆ. 16: ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ, ಬ್ರಿಟನ್ ವಿದೇಶ ಕಚೇರಿಯು ಭಾರತದಲ್ಲಿ ಪ್ರವಾಸದಲ್ಲಿರುವ ತನ್ನ ಪ್ರಜೆಗಳಿಗೆ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕೈಗೊಳ್ಳುವ ಯಾವುದೇ ರೀತಿಯ ಪ್ರಯಾಣ, ಜಮ್ಮುವಿಗೆ ವಿಮಾನ ಮೂಲಕ ಪ್ರಯಾಣ ಹಾಗೂ ಲಡಾಖ್ ವಲಯದಲ್ಲಿ ಯಾವುದೇ ರೀತಿಯ ಪ್ರಯಾಣದ ವಿರುದ್ಧ ಅದು ಎಚ್ಚರಿಕೆ ನೀಡಿದೆ.

ಆದಾಗ್ಯೂ, ಜಮ್ಮುವಿನ ಒಳಗಿನ ಪ್ರಯಾಣವನ್ನು ಅದು ಎಚ್ಚರಿಕೆ ವ್ಯಾಪ್ತಿಯಿಂದ ಹೊರಗಿಟ್ಟಿದೆ.

‘‘ನೀವು ಶ್ರೀನಗರದಲ್ಲಿ ಅಥವಾ ಮೂಲಕ ಪ್ರಯಾಣಿಸುತ್ತಿದ್ದರೆ ನೀವು ಜಾಗರೂಕತೆಯಿಂದ ಇರಬೇಕು. ಫೆಬ್ರವರಿ 14ರಂದು ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿಯಲ್ಲಿ ಭಾರತೀಯ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿಯೊಂದು ನಡೆದಿದೆ’’ ಎಂದು ಮಾರ್ಗದರ್ಶಿ ಸೂತ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News