ಕೆಟ್ಟ ಹೆಸರು ತರಲು ಸ್ಥಾಪಿತ ಹಿತಾಸಕ್ತಿಗಳ ಪ್ರಯತ್ನ: ಪಾಕಿಸ್ತಾನ

Update: 2019-02-16 16:23 GMT

ಇಸ್ಲಾಮಾಬಾದ್, ಫೆ. 16: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಪ್ರಕ್ರಿಯೆಯ ನಡುವೆ ಹಾಗೂ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಪಾಕಿಸ್ತಾನ ಪ್ರವಾಸಕ್ಕೆ ಮುನ್ನ, ಪಾಕಿಸ್ತಾನವನ್ನು ಕೆಟ್ಟದಾಗಿ ಬಿಂಬಿಸುವುದಕ್ಕಾಗಿ ಸ್ಥಾಪಿತ ಹಿತಾಸಕ್ತಿಗಳು ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ಹಾಗೂ ಇತರರು ಶುಕ್ರವಾರ ಹೇಳಿದ್ದಾರೆ.

‘‘ಇದು ಸರಿಯಾದ ಸಮಯವಾಗಿತ್ತು’’ ಎಂದು ವಿದೇಶ ನೀತಿ ವಿಶ್ಲೇಷಕ ಮುಶರ್ರಫ್ ಜೈದಿ ಹೇಳಿದ್ದಾರೆ. ‘‘ಪಾಕಿಸ್ತಾನ ತನ್ನ ವಿದೇಶ ನೀತಿಯ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಿರುವ ಹಂತದಲ್ಲಿ ಇದು ಸಂಭವಿಸಿದೆ’’ ಎಂದು ಅವರು ಹೇಳಿದ್ದಾರೆ.

ಆತ್ಮಹತ್ಯಾ ದಾಳಿಕೋರನು ಕಾಶ್ಮೀರಿಯಾಗಿದ್ದಾನೆ ಎಂಬುದನ್ನು ಪಾಕಿಸ್ತಾನದ ಮಾಧ್ಯಮಗಳು ಪ್ರಮುಖವಾಗಿ ಬಿಂಬಿಸಿವೆ ಹಾಗೂ ಅದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಎಂಬುದಾಗಿ ಹೇಳಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News