ತೋಳಿಗೆ ಕಪ್ಪುಪಟ್ಟಿ ಧರಿಸಿ ಶೌರ್ಯ ಪ್ರಶಸ್ತಿ ಸ್ವೀಕರಿಸಿದ ವೀರ ಯೋಧರು

Update: 2019-02-16 16:41 GMT

ಕೋಲ್ಕತಾ,ಫೆ.16: ಬಂಡುಕೋರ ವಿರೋಧಿ ಕಾರ್ಯಾಚರಣೆಗಳಲ್ಲಿ ಶೌರ್ಯವನ್ನು ಪ್ರದರ್ಶಿಸಿದ ಭಾರತೀಯ ಸೇನೆಯ ವೀರ ಯೋಧರಿಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈಶಾನ್ಯ ಸೇನಾ ಕಮಾಂಡರ್ ಶೌರ್ಯ ಪ್ರಶಸ್ತಿಗಳನ್ನು ವಿತರಿಸಿದರು. ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ ಪಿಎಫ್ ಯೋಧರ ಗೌರವಾರ್ಥವಾಗಿ, ತೋಳಿಗೆ ಕಪ್ಪುಪಟ್ಟಿಗಳನ್ನು ಧರಿಸಿ, ಯೋಧರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೂರ್ವ ಕಮಾಂಡ್ ನ ಜನರಲ್ ಆಫೀಸರ್, ಕಮಾಂಡಿಂಗ್ ಇನ್ ಚೀಫ್, ಲೆ.ಜ. ಎಂ.ಎಂ.ನರ್ವಾಣೆ ಹಾಗೂ ಸೇನಾಪಡೆಯ ಇತರ ಎಲ್ಲಾ ಸೇನಾಪಡೆಗಳ ಸಿಬ್ಬಂದಿ ಕಪ್ಪು ತೋಳಪಟ್ಟಿಯನ್ನು ಧರಿಸಿದ್ದರು.

ಕೋಲ್ಕತಾದಲ್ಲಿನ ಪೂರ್ವ ಕಮಾಂಡ್‌ನ ಮುಖ್ಯ ಕಾರ್ಯಾಲಯವಾದ ಫೋರ್ಟ್ ವಿಲಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನರ್ವಾ. ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸುತ್ತಾೆ ‘‘ಯಾವುದೇ ಜೀವಹಾನಿಯು ಅತ್ಯಂತ ದುಃಖಕರ ಘಟನೆಯಾಗಿದೆ, ನಾವೆಲ್ಲರೂ ಸಹೋದರರಾಗಿ ಒಬ್ಬರಿಗೊಬ್ಬರು ಕೈಜೋಡಿಸಿದ್ದೇವೆ. ನಾವು ಅದೇ ಚೈತನ್ಯದೊಂದಿಗೆ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸಲಿದ್ದೇವೆ ಹಾಗೂ ಒಂದೆರಡು, ಘಟನೆಗಳು ನಮ್ಮ ನೈತಿಕತೆಯ ಮೇಲೆ ಪರಿಣಾಮವನ್ನು ಬೀರಲಾರದು’’ ಎಂದು ಹೇಳಿದರು.

 ಈ ಸಲ ಒಂದು ಯುದ್ಧ ಸೇವಾ ಪದಕ, 10 ಸೇನಾ ಪದಕಗಳು (ಶೌರ್ಯ), ಒಂದು ಸೇನಾ ಪದಕ, ಐದು ವಿಶೇಷ ಸೇನಾ ಪದಕ ಹಾಗೂ 12 ವಿಶಿಷ್ಟ ಸೇವಾ ಪದಕಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News