ಈಗ ಆರ್ಭಟಿಸುತ್ತಿರುವ ಆ್ಯಂಕರ್ ಗಳು ಯೋಧರು ಪ್ರತಿಭಟನೆ ಮಾಡುವಾಗ ನಾಪತ್ತೆಯಾಗಿದ್ದೇಕೆ?

Update: 2019-02-16 17:34 GMT

ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ. ಈ ಹಿಂದೆ ಸೈನಿಕರು ಪ್ರತಿಭಟನೆ ಮಾಡಿದ್ದಾಗ ತೆಪ್ಪಗಿದ್ದು, ಇದೀಗ ಜೀವ ಬಂದಂತೆ ಬೊಬ್ಬಿಡುತ್ತಿರುವ ಕೆಲವು ಚಾನೆಲ್ ಗಳ ಆ್ಯಂಕರ್ ಗಳ ಬಗ್ಗೆ ಎನ್ ಡಿಟಿವಿಯ ರವೀಶ್ ಕುಮಾರ್ ತಮ್ಮ ಪ್ರೈಮ್ ಟೈಮ್ ಶೋ ಆರಂಭದಲ್ಲಿ ಹೇಳಿದ್ದು ಹೀಗೆ…

......................................

“ನನ್ನದೊಂದು ಮನವಿಯಿದೆ.."

“ಇಲ್ಲಿ ಲೈವ್ ಗೆ ಬರುವ ಮೊದಲು ಕೆಲವು ಟಿವಿ ಆ್ಯಂಕರ್ ಗಳು ರಕ್ತಮೆತ್ತಿದ ಮಾತುಗಳನ್ನಾಡುತ್ತಿರುವನ್ನು ನಾನು ಗಮನಿಸಿದೆ. ನಮಗೆ ಖಂಡನೆ ಬೇಕಿಲ್ಲ, ಪ್ರತೀಕಾರ ಬೇಕಿರುವುದು ಎಂದವರು ಹೇಳುತ್ತಿದ್ದರು. ನಾವು ದಾಳಿ ನಡೆಸಲೇ ಬೇಕು, ಪ್ರತೀಕಾರ ಕೈಗೊಳ್ಳಲೇ ಬೇಕು ಎಂದವರು ಹೇಳುತ್ತಿದ್ದಾರೆ. ಆದರೆ ಇಂತಹ ಕ್ಷಣದಲ್ಲಿ ಇಂತಹ ಮಾತುಗಳನ್ನಾಡುವಾಗ ನಾವು ಎಚ್ಚರ ವಹಿಸಬೇಕು”.

“ನಾವೆಲ್ಲರೂ”,

“ಆ್ಯಂಕರ್ ಗಳ ಮಾತುಗಳ ರಾಜಕೀಯವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.  ಆ್ಯಂಕರ್ ಒಬ್ಬ ಕಿರುಚಾಡಿ, ಪ್ರಚೋದಿಸಲು ಎಲ್ಲಾ ಘಟನೆಗಳು ಸಿನೆಮಾವಲ್ಲ. ಕೆಲ ಸಮಯ ನಿಶ್ಶಬ್ಧವಾಗಿ, ಮೆದುವಾಗಿ ಮಾತನಾಡಿ, ಹುತಾತ್ಮರಾದ ಯೋಧರ ಕುಟುಂಬಸ್ಥರ ಮನಸ್ಸಿನ ಆಲೋಚನೆಗಳನ್ನು ತಿಳಿದುಕೊಂಡು ನಾವು ವರ್ತಿಸಬೇಕು”.

“ತಮ್ಮ ಪ್ರೀತಿ ಪಾತ್ರ ಫೋಟೊಗಳು ಸ್ಕ್ರೀನ್ ಗಳ ಮೇಲೆ ಬರಬಾರದು ಎಂದು ಅವರಲ್ಲಿ ಹೆಚ್ಚಿನವರು ಭರವಸೆಯಲ್ಲಿರುತ್ತಾರೆ, ಪ್ರಾರ್ಥಿಸುತ್ತಾರೆ”.

“ಸರಕಾರದ ಪ್ರತಿಕ್ರಿಯೆ ಸಂಯಮದಿಂದಿದೆ. ಆದರೆ ಈ ಆ್ಯಂಕರ್ ಗಳೇಕೆ ಅಂತಹ ಸನ್ನಿವೇಶಗಳನ್ನು ಬಯಸುತ್ತಾರೆ. ಅವರು ಮಾತನಾಡಲು ಆರಂಭಿಸಿದಾಗ ಮಾತನಾಡಬೇಕಾದ ಭಾಷೆಯೇ ಇಲ್ಲದಾಗುತ್ತದೆ. ಜನರು ಹುತಾತ್ಮರಾದುದು ಟಿಆರ್ ಪಿ ರೇಸ್ ಆಗಲು ಸಾಧ್ಯವಿಲ್ಲ”.

“ಇದು ಸೂಕ್ತ ಸಮಯವಲ್ಲ, ಆದರೆ ನಾನಿದನ್ನು ಹೇಳಲೇಬೇಕು: ಡಿಸೆಂಬರ್ 13ರಂದು ಪ್ಯಾರಾ ಮಿಲಿಟರಿ ಪಡೆ ತ್ರಿವರ್ಣ ಧ್ವಜ ಹಿಡಿದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದಾಗ ಈ ಆ್ಯಂಕರ್ ಗಳು ಎಲ್ಲಿದ್ದರು?. ಈ ಸೈನಿಕರ ಪರವಾಗಿ ಅಂದು ಬೊಬ್ಬಿಡಲು, ಕಿರುಚಲು ಈ ಆ್ಯಂಕರ್ ಗಳು ಎಲ್ಲಿದ್ದರು?”.

“ಅಂದು ಅವರ ಬೇಡಿಕೆ ಏನಾಗಿತ್ತು?, ಒಂದು ರ್ಯಾಂಕ್, ಪಿಂಚಣಿ, ಪ್ರತಿ ಜಿಲ್ಲೆಗಳಲ್ಲೂ ಸಿಜಿಎಚ್ ಎಸ್ ಡಿಸ್ಪೆನ್ಸರಿಗಳು. ಸೇನೆಯ ಹಾಗೆಯೇ ಕ್ಯಾಂಟೀನ್ ನಲ್ಲಿ ರಿಯಾಯಿತಿಗಳು. ಅವರು ಸೇವೆ ಮತ್ತು ಶೌರ್ಯದ ಆಧಾರದಲ್ಲಿ ಅವರು ಈ ಬೇಡಿಕೆಗಳನ್ನು ಮುಂದಿಟ್ಟಿದ್ದರು”.

“ಡಿಸೆಂಬರ್ 13ರ ಈ ವಿಡಿಯೋಗಳಿಗಾಗಿ ಹುಡುಕಾಡಿ. ತಮ್ಮ ಬೇಡಿಕೆಗಳನ್ನು ಪ್ರಸಾರ ಮಾಡುವಂತೆ ಮಾಧ್ಯಮಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮಾಧ್ಯಮಗಳು ಸದುರಿಹೋದವು. ಭಯೋತ್ಪಾದಕ ದಾಳಿಯ ನಂತರ ಕೋಪೋದ್ರಿಕ್ತಗೊಳ್ಳುವ ಮಾಧ್ಯಮಗಳು ಪ್ಯಾರಾ ಮಿಲಿಟರಿ ಪಡೆಗಳ ಜೀವನ ಮತ್ತು ಭವಿಷ್ಯ ರೂಪಿಸಲು ನಡೆದ ಪ್ರತಿಭಟನೆ ವೇಳೆ ಎಲ್ಲಿ ಮಾಯವಾಗಿತ್ತು?”

“ರಾಜಕೀಯ ಉದ್ದೇಶಗಳಿಗಾಗಿ ಮಾತ್ರ ಪ್ರಚೋದನಾತ್ಮಕ ಮಾತುಗಳನ್ನು ಬಳಸಲಾಗುತ್ತದೆ. ಅದು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಈ ಬಗ್ಗೆ ಆ್ಯಂಕರ್ ಗಳಿಗೆ ತಿಳಿದಿರಬೇಕು, ಏಕೆಂದರೆ ಅವರು ಈ ಹಿಂದೆಯೂ ಇಂತಹ ಭಾಷೆಗಳನ್ನು ಬಳಸಿದ್ದಾರೆ. ಕಾಶ್ಮೀರದ ಪರಿಸ್ಥಿತಿಯನ್ನು ಮಾಧ್ಯಮಗಳು ಹಾಳುಗೆಡವಿದೆಯೇ ಹೊರತು ಸುಧಾರಿಸಿಲ್ಲ”

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News