ಪ್ರಥಮ ಟೆಸ್ಟ್: ಶಿ್: ಶ್ರೀಲಂಕಾಗೆ ರೋಚಕ ಜಯ

Update: 2019-02-16 18:00 GMT

ಬ್ರಾಡ್ ದಾಖಲೆ ಮುರಿದ ಡೇಲ್ ಸ್ಟೇಯ್ನ್

ಕಿಂಗ್ಸ್‌ಮೇಡ್, ಫೆ.16: ಶ್ರೀಲಂಕಾ ತಂಡ ಕುಶಾಲ್ ಪೆರೇರ ಅಮೋಘ ಶತಕದ (ಅಜೇಯ 153) ನೆರವಿನಿಂದ ದ.ಆಫ್ರಿಕವನ್ನು 1 ವಿಕೆಟ್‌ನಿಂದ ಮಣಿಸಿ ಪ್ರಥಮ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ಗೆಲುವಿಗೆ ಅಸಾಧ್ಯ ಎನ್ನಬಹುದಾದ 304 ರನ್‌ಗಳ ಗುರಿ ಪಡೆದಿದ್ದ ಲಂಕಾ ಒಂದು ಹಂತದಲ್ಲಿ 226ಕ್ಕೆ 9 ವಿಕೆಟ್ ಕಳೆದುಕೊಂಡಿತ್ತು.

ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ಪೆರೇರ ತಂಡವನ್ನು ಜಯದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯ ವಿಕೆಟ್‌ಗೆ ವಿಶ್ವ ಫೆರ್ನಾಂಡೊ ಹಾಗೂ ಪೆರೇರ ಜೋಡಿ ಅಮೂಲ್ಯ 78 ರನ್ ಸೇರಿಸಿತು. ಎರಡು ಪಂದ್ಯಗಳ ಸರಣಿಯಲ್ಲಿ ಲಂಕಾ 1-0 ಮುನ್ನಡೆ ಸಾಧಿಸಿದೆ. ಈ ಮೂಲಕ ತವರಿನಲ್ಲಿ ಸತತ 7 ಸರಣಿಗಳನ್ನು ಜಯಿಸಿ ಮುನ್ನಡೆದಿದ್ದ ಹರಿಣಗಳ ವೇಗಕ್ಕೆ ಲಂಕಾ ವಿರಾಮ ಹಾಕಿದೆ. ಡರ್ಬನ್‌ನ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಅಂದಾಜು 100 ವರ್ಷಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಗರಿಷ್ಠ ರನ್ ಚೇಸ್ ಇದಾಗಿದೆ. ಟೆಸ್ಟ್‌ನಲ್ಲಿ ಎರಡನೇ ಶತಕ ಬಾರಿಸಿದ ಪೆರೇರ ದ.ಆಫ್ರಿಕದಲ್ಲಿ 4ನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿದ ಪ್ರಥಮ ಏಶ್ಯ ಆಟಗಾರನಾಗಿದ್ದಾರೆ. ಒಟ್ಟಾರೆ ದ.ಆಫ್ರಿಕದಲ್ಲಿ ಟೆಸ್ಟ್ ಶತಕ ಬಾರಿಸಿದ ಶ್ರೀಲಂಕಾದ 4ನೇ ಆಟಗಾರ ಪೆರೇರ.

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಶನಿವಾರ ನಾಲ್ಕನೇ ದಿನದಾಟದಲ್ಲಿ ಎರಡು ಅಮೂಲ್ಯ ವಿಕೆಟ್ ಪಡೆದ ದ.ಆಫ್ರಿದ ವೇಗಿ ಡೇಲ್ ಸ್ಟೇಯ್ನಿ, ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್‌ರ ದಾಖಲೆಯನ್ನು ಮುರಿದಿದ್ದಾರೆ. 35 ವರ್ಷದ ಸ್ಟೇಯ್ನಾ, ಲಂಕಾದ ಓಶೋದ ಫೆರ್ನಾಂಡೊ ಹಾಗೂ ವಿಕೆಟ್ ಕೀಪರ್ ದಾಂಡಿಗ ನಿರೋಶನ್ ಡಿಕ್ವೆಲ್ಲ ಅವರನ್ನು ಔಟ್ ಮಾಡುವುದರ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ್ದಾರೆ. ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ 7ನೇ ಸ್ಥಾನ ಹಾಗೂ ವೇಗದ ಬೌಲರ್‌ಗಳ ವಿಭಾಗದಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. ಸದ್ಯ 439 ವಿಕೆಟ್ ಪಡೆದಿರುವ ಅವರು, ವೆಸ್ಟ್ ಇಂಡೀಸ್ ದಂತಕತೆ ಕರ್ಟ್ನಿ ವಾಲ್ಷ್(519) ಅವರಿಗಿಂತ 80 ವಿಕೆಟ್ ಹಿಂದಿದ್ದಾರೆ. ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್‌ಗಳ ವಿಭಾಗವನ್ನು ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್(575) ಮುನ್ನಡೆಸುತ್ತಿದ್ದು, ಆಸ್ಟ್ರೇಲಿಯದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್(563) ಎರಡನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್(437) ಸದ್ಯ 5ನೇ ಸ್ಥಾನಕ್ಕೆ ಜಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News