ಬೋಳಂತೂರಿನಲ್ಲಿ ಪಾಪ್ಯುಲರ್ ಫ್ರಂಟ್ ದಿನಾಚರಣೆ

Update: 2019-02-17 04:09 GMT

ಬಂಟ್ವಾಳ, ಫೆ.17: ಬೋಳಂತೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನವನ್ನು ರವಿವಾರ ಬೆಳಗ್ಗೆ ಆಚರಿಸಲಾಯಿತು.

ಕಲ್ಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ಬೋಳಂತೂರು ಗ್ರಾಮ ಸಮಿತಿಯ ಅದ್ಯಕ್ಷ ಮುಹಮ್ಮದ್ ಮಾಡದ ಬಳಿ ಧ್ವಜಾರೋಹಣ ನೆರವೇರಿಸಿದರು. ಹಮೀದ್ ಬೈಲ್ ಪಾಪ್ಯುಲರ್ ಫ್ರಂಟ್ ದಿನದ ಸಂದೇಶ  ನೀಡಿದರು.

   ಇದೇ ವೇಳೆ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರಿಂದ ಹತರಾದ ಹುತಾತ್ಮ ಸೈನಿಕರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

  ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೋಳಂತೂರು ಅಧ್ಯಕ್ಷ ಅಶ್ರಫ್ ಬೈಲ್, ಶರೀಫ್ ಸಿ.ಎಂ. ಸುರಿಬೈಲ್,ರಿಯಾಝ್ ತಾಳಿತ್ತನೂಜಿ ಉಪಸ್ಥಿತರಿದ್ದರು.

ನವಾಝ್ ಬೋಳಂತೂರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News