ಗುಡ್ಡೆಅಂಗಡಿ ಉರೂಸ್ ಸಮಾರೋಪ

Update: 2019-02-17 04:17 GMT

ಬಂಟ್ವಾಳ, ಫೆ.17: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ ಅವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ ವಾರ್ಷಿಕ ಹಗಲು ಉರೂಸ್ ನ ಸಮಾರೋಪ ಸಮಾರಂಭ ಶನಿವಾರ ರಾತ್ರಿ ಬೋಗೊಡಿ ಮಸೀದಿ ವಠಾರದಲ್ಲಿ ನಡೆಯಿತು.

"ಯುವಕರು ದೀನಿನ ಸ್ತಂಭಗಳು" ಎಂಬ ವಿಷಯದ ಕುರಿತು ಎನ್.ಜೆ.ಎಂ.ನ ಖತೀಬ್ ಅಬ್ದುಲ್ಲಾ ರಹ್ಮಾನಿ ಬಾಂಬಿಲ ಮುಖ್ಯ ಭಾಷಣ ಮಾಡಿದರು.

ಕೇರಳ ತಾನೂರಿನ ಸೈಯದ್ ಫಕ್ರುದ್ದೀನ್ ಹಸನಿ ಅಲ್ ಖಾದಿರಿ ದಾರಿಮಿ ತಂಙಳ್ ದುಆಃ ನೆರವೇರಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ‌.ಎಚ್‌.ಖಾದರ್, ಎನ್.ಜೆ.ಎಂ. ಮದ್ರಸ ಕನ್ಸ್ ಸ್ಟ್ರಕ್ಷನ್ ಕಮಿಟಿಯ ಅಧ್ಯಕ್ಷ ಎಸ್.ಮುಹಮ್ಮದ್, ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್, ಪಿ.ಬಿ.ಅಹ್ಮದ್ ಹಾಜಿ, ಅಬೂಬಕರ್ ಮುಸ್ಲಿಯಾರ್, ದ.ಕ. ವಕ್ಫ್ ಬೋರ್ಡ್ ಅಧ್ಯಕ್ಷ ಯು.ಕೆ.ಮೋನು ಕಣಚೂರು ಉಪಸ್ಥಿತರಿದ್ದರು.

ಎನ್.ಜೆ.ಎಂ. ಮದ್ರಸ-ಕನ್ಸ್ ಸ್ಟ್ರಕ್ಷನ್ ಕಮಿಟಿಯ ಹಾಜಿ ಬಿ.ಎ.ಮುಹಮ್ಮದ್ ನೀಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಎನ್.ಜೆ.ಎಂ. ಅಧ್ಯಕ್ಷ ಉಮರ್ ಫಾರೂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎನ್.ಜೆ.ಎಂ. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ವಂದಿಸಿದರು. ಸಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News