ಐವರು ಪ್ರತ್ಯೇಕವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದ ಜಮ್ಮು-ಕಾಶ್ಮೀರ ಸರಕಾರ

Update: 2019-02-17 09:52 GMT

ಶ್ರೀನಗರ, ಫೆ.17: ಕಾಶ್ಮೀರದ ಐವರು ಪ್ರತ್ಯೇಕವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ರವಿವಾರ ಹಿಂಪಡೆದಿದೆ.

 ಪ್ರತೇಕವಾದಿ ನಾಯಕರಾದ   ಮಿರ್ವೈಜ್ ಉಮರ್ ಫಾರೂಕ್, ಅಬ್ದುಲ್ ಘನಿ ಭಟ್, ಬಿಲಾಲ್ ಲೋನ್, ಹಾಶಿಮ್ ಖುರೇಷಿ ಮತ್ತು ಶಬೀರ್ ಷಾ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ. ಆದರೆ ಪಾಕಿಸ್ತಾನ ಪರ  ನಿಲುವು ಹೊಂದಿರುವ ಸೈಯ್ಯದ್ ಅಲಿ ಶಾ ಗೀಲಾನಿ ಅವರ ಹೆಸರು ಆದೇಶ ಪತ್ರದಲ್ಲಿ  ಇಲ್ಲ.

ಪ್ರತ್ಯೇಕವಾದಿ ನಾಯಕರಿಗೆ ನೀಡಿಲಾಗಿದ್ದ ಭದ್ರತೆ , ವಾಹನ ಮತ್ತು ಇತರ ಎಲ್ಲ ಸರಕಾರಿ ಸೌಲಭ್ಯಗಳಗಳನ್ನು ತಕ್ಷಣವೇ ಹಿಂಪಡೆಯುವಂತೆ   ಆದೇಶ ನೀಡಲಾಗಿದೆ.

ಭದ್ರತಾ ಅಥವಾ ಸೌಲಭ್ಯಗಳನ್ನು ಹೊಂದಿದ ಇತರ ಪ್ರತ್ಯೇಕತಾವಾದಿಗಳಿದ್ದರೆ ತಕ್ಷಣವೇ ಹಿಂಪಡೆಯುವ  ಬಗ್ಗೆ  ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು  ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News