×
Ad

ಪುಲ್ವಾಮ ದಾಳಿ ಹತಾಶೆಯ ಕೃತ್ಯ: ರಾಜ್‌ನಾಥ್

Update: 2019-02-17 21:02 IST

ಭದ್ರಕ್(ಓಡಿಶಾ),ಫೆ.17: 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನವು ಪ್ರಾಯೋಜಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಆರೋಪಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಉಗ್ರಗಾಮಿಗಳ ವಿರುದ್ಧ ಭಾರತೀಯ ಪಡೆಗಳು ನಡೆಸಿದ ಯಶಸ್ವಿ ಕಾರ್ಯಾಚರಣೆಗಳಿಂದ ಭಯೋತ್ಪಾದಕರು ಎದೆಗುಂದಿದ್ದಾರೆಂಬುದನ್ನು ಅರಿತ ನೆರೆಯ ರಾಷ್ಟ್ರವಾದ  ಪಾಕಿಸ್ತಾನವು ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರಚೋದನೆ ನೀಡಿದೆಯೆಂದು ಅವರು ಹೇಳಿದ್ದಾರೆ.

ಒಡಿಶಾದ ಭದ್ರಕ್ ಪಟ್ಟಣದಲ್ಲಿ ರವಿವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘‘ ಪುಲ್ವಾಮ ದಾಳಿಗೆ ‘ ಸೂಕ್ತವಾದ ಉತ್ತರ’ವನ್ನು ನೀಡುವುದಕ್ಕೆ ಭದ್ರತಾ ಪಡೆಗಳಿಗೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿ ಸಿಆರ್‌ಪಿಎಫ್ ಯೋಧರ ಬಲಿದಾನವು ವ್ಯರ್ಥವಾಗಲಾರದು ಎಂದರು.

ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರ ಸರಕಾರ ಹಾಗೂ ಭದ್ರತಾಪಡೆಗಳಿಗೆ ಸಂಪೂರ್ಣವಾದ ಬೆಂಬಲವನ್ನು ಘೋಷಿಸಿರುವುದಾಗಿ ದೃಢಪಡಿಸಿದ ರಾಜ್‌ನಾಥ್, ಇಡೀ ದೇಶವು ಸೇನೆಯ ಬೆಂಬಲಕ್ಕೆ ನಿಂತಿದ್ದು, ಅದು ಖಂಡಿತವಾಗಿಯೂ ‘‘ಶತ್ರುವಿಗೆ ಪಾಠ ಕಲಿಸಲಿದೆ’’ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News