ಮಂಗಳೂರು: ಶೆಫರ್ಡ್ ಸ್ಕೂಲ್ ವಿದ್ಯಾರ್ಥಿಗಳು, ಪೋಷಕರಿಂದ ಮಡಿದ ಯೋಧರಿಗೆ ಮೌನ ಪ್ರಾರ್ಥನೆ

Update: 2019-02-18 05:34 GMT

ಮಂಗಳೂರು, ಫೆ. 18: ಶೆಫರ್ಡ್ ಇಂಟರ್ ನ್ಯಾಶನಲ್ ಅಕಾಡಮಿಯ ವಾರ್ಷಿಕೋತ್ಸವವು ಪುರಭವನದಲ್ಲಿ ನಡೆಯಿತು. ಈ ಸಂದರ್ಭ ವಿದ್ಯಾರ್ಥಿಗಳು,  ಪೋಷಕರು ಮತ್ತು ಆಡಳಿತ ಕಮಿಟಿ ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಯಾದ ಯೋಧರ ಸ್ಮರಣಾರ್ಥ ಮೌನ ಪ್ರಾರ್ಥನೆ ಸಲ್ಲಿಸಿದರು.

ಶೆಫರ್ಡ್ ಸ್ಕೂಲ್ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ವಿದ್ಯಾರ್ಥಿಗಳನ್ನು ಮಾನವೀಯ ಮತ್ತು ನೈತಿಕ ಮೌಲ್ಯಗಳ ಮೂಲಕ ಅತ್ಯುತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಕನಸು ಹೊಂದಿದೆ. ರಾಷ್ಟ್ರಕ್ಕೆ ಕೊಡುಗೆ ನೀಡುವ ತಲೆಮಾರನ್ನು ಬೆಳೆಸುತ್ತಿರುವ ಶೆಫರ್ಡ್ ಇಂಟರ್ ನ್ಯಾಶನಲ್ ಸ್ಕೂಲ್ ಈಗಾಗಲೇ ವಲಚ್ಚಿಲ್ ಸಮೀಪ ಮೂರು ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಅತ್ಯುತ್ತಮ ಸೌಲಭ್ಯದ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸುವ ಯೋಜನೆ ಹಾಕಿದೆ. ಶೆಪರ್ಡ್ ಎಂದರೆ ಅತ್ಯುತ್ತಮ ಮಾರ್ಗದರ್ಶನ ಎಂಬ ಅರ್ಥವಿದೆ ಎಂದು ಆಡಳಿತ ಕಮಿಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News