ಮಾಜಿ ಬಿಜೆಪಿ ನಾಯಕ ಕೀರ್ತಿ ಆಝಾದ್ ಕಾಂಗ್ರೆಸ್‌ಗೆ ಸೇರ್ಪಡೆ

Update: 2019-02-18 07:40 GMT

 ಹೊಸದಿಲ್ಲಿ, ಫೆ.18: ಬಿಜೆಪಿಯ ಮಾಜಿ ನಾಯಕ ಕೀರ್ತಿ ಆಝಾದ್ ಸೋಮವಾರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ರಾಜಕಾರಣಿಯಾಗಿ ಪರಿವರ್ತಿತರಾಗಿದ್ದ ಕ್ರಿಕೆಟಿಗ ಆಝಾದ್ ಟ್ವಿಟರ್‌ನ ಮೂಲಕ ಕಾಂಗ್ರೆಸ್ ಸೇರ್ಪಡೆಯನ್ನು ಘೋಷಿಸಿದ್ದು, ತನ್ನನ್ನು ರಾಹುಲ್ ಗಾಂಧಿ ಸಾಂಪ್ರದಾಯಿಕ ಮಿಥಿಲಾ ಶೈಲಿಯಲ್ಲಿ ಸನ್ಮಾನಿಸಿದರು ಎಂದು ಹೇಳಿದ್ದಾರೆ.

ಬಿಜೆಪಿ 2015ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಆಝಾದ್‌ರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಪ್ರಸ್ತುತ ಅವರು ಬಿಹಾರದ ದರ್ಭಾಂಗ್ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News