ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ: ಕೇರಳದಲ್ಲಿ ಹರತಾಳ, ಪರೀಕ್ಷೆಗಳು ಮುಂದೂಡಿಕೆ

Update: 2019-02-18 07:47 GMT

ತಿರುವನಂತಪುರಂ, ಫೆ.18: ಪೆರಿಯ ಕಲ್ಯಾಟ್ ಎಂಬಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯ ಕೇರಳ ಹರತಾಳಕ್ಕೆ ಕರೆ ನೀಡಲಾಗಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸೋಮವಾರ ನಡೆಯಬೇಕಿದ್ದ ಎಸೆಸೆಲ್ಸಿ ಮಾದರಿ ಪರೀಕ್ಷೆ, ಹೈಯರ್ ಸೆಕಂಡರಿ ಪ್ರಥಮ ವರ್ಷ ಮಾದರಿ ಪರೀಕ್ಷೆ, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.

ಹರತಾಳದಿಂದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಮುಲ್ಲಪ್ಪಳ್ಳಿ ರಾಮಚಂದ್ರನ್ ‍ರ ಜನಮಹಾ ಯಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದೆ.

ಕಾಸರಗೋಡಿನ ಪೆರಿಯ ಕಲ್ಯಾಟ್ ‍ನಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ನಿನ್ನೆ ರಾತ್ರೆ ಏಳು ಗಂಟೆಗೆ ಕೊಲೆ ಮಾಡಲಾಗಿತ್ತು. ಕಲ್ಯಾಟ್ಟ್ ಕೃಷ್ಣ ಮತ್ತು ಬಾಲಾಮಣಿ ದಂಪತಿಯ ಪುತ್ರ ಕೃಪೇಶ್ (19) ಮತ್ತು ಕುರಂಗರದ ಸತ್ಯನಾರಾಯಣನ್‍ ರ ಪುತ್ರ ಶರತ್(22) ಕೊಲೆಗೀಡಾದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಕೃಪೇಶ್ ಘಟನೆ ನಡೆದ ಸ್ಥಳದಲ್ಲಿ ಮೃತಪಟ್ಟರೆ, ಮಾರಣಾಂತಿಕವಾಗಿ ಗಾಯಗೊಂಡಿದ್ದ ಶರತ್ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News