ಭಾರತದಲ್ಲಿರುವ ತನ್ನ ರಾಯಭಾರಿಯನ್ನು ಕರೆಸಿಕೊಂಡ ಪಾಕಿಸ್ತಾನ

Update: 2019-02-18 07:48 GMT

 ಕರಾಚಿ, ಫೆ.18: ಸಮಾಲೋಚನೆ ನಡೆಸುವ ಸಲುವಾಗಿ ಭಾರತದಲ್ಲಿರುವ ತನ್ನ ರಾಯಭಾರಿ ಸೊಹೈಲ್ ಮಹಮೂದ್‌ರನ್ನು ಇಸ್ಲಾಮಾಬಾದ್‌ಗೆ ಬರುವಂತೆ ಸೂಚಿಸಲಾಗಿದೆ ಎಂದು ಪಾಕಿಸ್ತಾನ ಸರಕಾರಿ ವಕ್ತಾರ ಸೋಮವಾರ ತಿಳಿಸಿದ್ದಾರೆ.

 ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಸೋಮವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಎನ್‌ಕೌಂಟರ್‌ನಲ್ಲಿ ಭಾರತದ ಓರ್ವ ಮೇಜರ್ ಸಹಿತ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಕಣಿವೆ ರಾಜ್ಯದಲ್ಲಿ ಕಳೆದ 5 ದಿನಗಳಲ್ಲಿ ಭಾರತದ 45 ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಗುರುವಾರ ಪುಲ್ವಾಮದ ಆವಂತಿಪುರ ಪ್ರದೇಶದಲ್ಲಿ ಉಗ್ರನೊಬ್ಬನ ಆತ್ಮಾಹುತಿ ದಾಳಿಗೆ 40 ಯೋಧರು ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News