"ಮೋದಿಯವರೇ, ಇನ್ನೊಂದು ಗೋಧ್ರಾ ಹತ್ಯಾಕಾಂಡ ಮಾಡಿಸಿ" ಎಂದ ಸಾಧ್ವಿ ಪ್ರಾಚಿ!

Update: 2019-02-18 10:37 GMT

ಹೊಸದಿಲ್ಲಿ, ಫೆ.18: ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ‘ಗೋಧ್ರಾ ಹತ್ಯಾಕಾಂಡ’ವನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಸಂಘಪರಿವಾರದ ನಾಯಕಿ ಸಾಧ್ವಿ ಪ್ರಾಚಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಪುಲ್ವಾಮ ದಾಳಿಯ ಬಗ್ಗೆ ಸಾಧ್ವಿಯನ್ನು ಪತ್ರಕರ್ತರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಾಕಿಸ್ತಾನಕ್ಕೆ ಪಾಠ ಕಲಿಸಲು ಮೋದಿ ಮತ್ತೊಂದು ಗೋಧ್ರಾ ಹತ್ಯಾಕಾಂಡ’ ನಡೆಸಬೇಕು ಎಂದಿದ್ದಾರೆ…!.

ಸಾಧ್ವಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ನಾನು ಪ್ರಧಾನಮಂತ್ರಿಯವರಲ್ಲಿ ಕೈಮುಗಿದು ವಿನಂತಿಸುತ್ತಿದ್ದೇನೆ. ಪಾಕಿಸ್ತಾನದ ವಿರುದ್ಧ ನೀವು ಗೋಧ್ರಾ ಹತ್ಯಾಕಾಂಡದಂತೆ ಮತ್ತೊಂದು ಹತ್ಯಾಕಾಂಡ ಮಾಡಿಸಿದರೆ ಇಡೀ ದೇಶವೇ ನಿಮಗೆ ತಲೆಬಾಗುತ್ತದೆ. ರಾವಲ್ಪಿಂಡಿ ಮತ್ತು ಕರಾಚಿಯನ್ನು ನಾವು ಸುಟ್ಟು ಹಾಕುವವರೆಗೆ ಭಯೋತ್ಪಾದನೆ ಕೊನೆಯಾಗುವುದಿಲ್ಲ” ಎಂದವರು ಹೇಳಿದರು.

ಸಾಧ್ವಿ ಪ್ರಾಚಿಯ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ವೈರಲ್ ಆಗಿದೆ. ‘2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೋದಿ ಪಾತ್ರವಿದೆ ಎಂದು ಪ್ರಾಚಿ ಹೇಳಿದ್ದಾರೆಯೇ?” ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿದ್ದಾರೆ.

“ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ 2 ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ.

1.ಚುನಾವಣೆ ಹತ್ತಿರದಲ್ಲಿರುವಂತೆ ಭಾರತದ ಉತ್ತರ ಪಶ್ಚಿಮ ಗಡಿಯಲ್ಲಿ ಮೋದಿ ಸರಕಾರ ಏನೋ ನಾಟಕ ಮಾಡಲಿದೆ.

2.ಗೋಧ್ರಾ ಹತ್ಯಾಕಾಂಡವನ್ನು ನಡೆಸಿದವರು ಯಾರು ಎಂಬುದನ್ನು ಆಕೆ ಹೇಳಿದ್ದಾರೆ” ಎಂದು ಪತ್ರಕರ್ತ ರವಿ ನಾಯರ್ ಟ್ವೀಟ್ ಮಾಡಿದ್ದಾರೆ.

“ಆ ಮಹಿಳೆ ಮೂರ್ಖಳಾಗಿರಬಹುದು ಆದರೆ ಆಕೆ ಹೇಳಿದ್ದು ಸತ್ಯ, ಮೋದಿಯ ನೇರ ವಿರುದ್ಧ” ಎಂದು ನಮೋ ಪಕೋಡೆವಾಲಾ ಎನ್ನುವ ಖಾತೆ ಟ್ವೀಟ್ ಮಾಡಿದೆ.

ಕಾಶಿಫ್ ಜವೈದ್ ಎಂಬವರು ಟ್ವೀಟ್ ಮಾಡಿ, “ಗೋಧ್ರಾ ದುರಂತದ ಹಿಂದಿರುವವರು ಯಾರು ಎನ್ನುವುದು ಈಗ ಸ್ಪಷ್ಟವಾಗಿದೆ?, ಸಂಚುಕೋರರು ಯಾರು?, ಬಿಜೆಪಿಗೆ ನಾಚಿಕೆಯಾಗಬೇಕು! ಆರೆಸ್ಸೆಸ್ ಗೆ ನಾಚಿಕೆಯಾಗಬೇಕು! ಮೋದಿಗೆ ನಾಚಿಕೆಯಾಗಬೇಕು !” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News