ಆರ್‌ಬಿಐಯಿಂದ ಕೇಂದ್ರ ಸರಕಾರಕ್ಕೆ 28,000 ಕೋ. ರೂ. ವರ್ಗಾವಣೆ

Update: 2019-02-18 16:49 GMT

ಹೊಸದಿಲ್ಲಿ, ಫೆ. 18: ಕೇಂದ್ರ ಸರಕಾರಕ್ಕೆ 28,000 ಕೋ. ರೂ. ಮಧ್ಯಂತರ ಡಿವಿಡೆಂಟ್ ನೀಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಘೋಷಿಸಿದೆ. ಸೀಮಿತ ಲೆಕ್ಕಾಚಾರ ಪರಿಶೀಲನೆ ಹಾಗೂ ವಿಸ್ತೃತ ಬಂಡವಾಳ ಚೌಕಟ್ಟನ್ನು ಅನ್ವಯಿಸಿ 2018 ಡಿಸೆಂಬರ್ 31ರಂದು ಅಂತ್ಯಗೊಂಡ ಅರ್ಧ ವಾರ್ಷಿಕದ ಮಧ್ಯಂತರ ಮಿಗುತಾಯ 28,000 ರೂಪಾಯಿಯನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಲು ಬ್ಯಾಂಕ್‌ನ ಮಂಡಳಿ ನಿರ್ಧರಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೇಳಿಕೆ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯಂತರ ವಿಗುತಾಯವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುತ್ತಿರುವುದು ಇದು ಎರಡನೇ ಯಶಸ್ವಿ ವರ್ಷ. ಆರ್‌ಬಿಐ ಜುಲೈ-ಜೂನ್ ವಿತ್ತ ವರ್ಷವನ್ನು ಅನುಸರಿಸುತ್ತದೆ. ಆದುದರಿಂದ ಮೊದಲ ಅರ್ಧ ವರ್ಷ ಡಿಸೆಂಬರ್‌ಗೆ ಪೂರ್ಣಗೊಳ್ಳುತ್ತದೆ. ಈ ಹಿಂದಿನ 10,000 ಕೋಟಿ ರೂಪಾಯಿ ಮಧ್ಯಂತರ ಡಿವಿಡೆಂಟ್ ಸಹಿತ 50,000 ಕೋ. ರೂಪಾಯಿ ವರ್ಗಾವಣೆಗೆ ಹೋಲಿಸಿದರೆ, ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯಾ ಪ್ರಸಕ್ತ (2018-19) ವರ್ಷ 40,000 ಕೋಟಿ ರೂಪಾಯಿಯನ್ನು ಈಗಾಗಲೇ ವರ್ಗಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News