ಕೋಟೆಕಾರು: ನೇಣು ಬಿಗಿದು ವೃದ್ಧ ದಂಪತಿ ಆತ್ಮಹತ್ಯೆ

Update: 2019-02-19 06:05 GMT

ಮಂಗಳೂರು, ಫೆ. 19: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಬೀರಿಯಲ್ಲಿ ನಡೆದಿದೆ.

ಆಕಾಶವಾಣಿಯ ನಿವೃತ್ತ ಉದ್ಯೋಗಿ ದೇವರಾಜ್ ಗಾಣಿಗ (74) ಮತ್ತು ವಸಂತಿ (64) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಅವರು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ದಂಪತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಉಳ್ಳಾಲ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News