ಸಾಹಿತ್ಯದಿಂದ ಜೀವನೋತ್ಸಾಹ: ಡಾ.ಅಶೋಕ್ ಕುಮಾರ್

Update: 2019-02-19 12:40 GMT

ಉಡುಪಿ, ಫೆ.19: ಸಾಹಿತ್ಯ ರಚನೆಯಿಂದ, ಸಾಹಿತ್ಯದ ಪ್ರೀತಿಯಿಂದ ಆತ್ಮ ಸಂತೋಷ ಮತ್ತು ಜೀವನೋತ್ಸಾಹ ಲಭಿಸುತ್ತದೆ. ಜೀವನೋತ್ಸಾಹದಿಂದ ಖಿನ್ನತೆ ಹತ್ತಿರ ಸುಳಿಯುವುದಿಲ್ಲ ಎಂದು ಹಿರಿಯ ಕವಿ, ಕಾದಂಬರಿಕಾರ, ನಟ ಡಾ.ಕಾಸರಗೋಡು ಅಶೋಕ್ ಕುಮಾರ್ ಹೇಳಿದ್ದಾರೆ.

ಉಡುಪಿ ಬೀಡಿನಗುಡ್ಡೆಯ ಪ್ರಕಾಶ್ ಪೂಜಾರಿಯವರ ಮನೆಯಂಗಳದ ಬೆನಗಲ್ ನರಸಿಂಗ್ ರಾವ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜನಪರ ಚಿಂತನ ವೇದಿಕೆಯ ಫೆಬ್ರವರಿಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಅವರು ಸಾಹಿತ್ಯಾಭಿರುಚಿ ವಿಷಯದಲ್ಲಿ ಉಪನ್ಯಾಸ ನೀಡಿದರು.

ಸಾಹಿತ್ಯ ರಚಿಸುವ ಮೂಲಕ ಸಾಹಿತಿ ಎನಿಸಿಕೊಂಡವರು ಸತ್ತ ಬಳಿಕವೂ ಬದುಕಿರುತ್ತಾರೆ. ಪ್ರತೀ ಮಕ್ಕಳಲ್ಲಿ ಸಾಹಿತ್ಯದಲ್ಲಿ ಒಲವಿರುತ್ತ್ತದೆ. ಆದರೆ ಅದನ್ನು ಬೆಳೆಸುವ ಕೆಲಸ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಯನ್ನು ಬೆಳೆಸುವ ಕೆಲಸವನ್ನು ಹೆತ್ತವರು ಹಾಗೂ ಶಿಕ್ಷಕರು ಮಾಡಬೇಕು ಎಂದು ಅವರು ತಿಳಿಸಿದರು.

ಸುಮಾ ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಕಟಪಾಡಿ ಹಾಗೂ ಭಾರತಿ ಅಭಿಪ್ರಾಯಗಳನ್ನು ಮಂಡಿಸಿದರು. ಕಾರ್ಯಕ್ರಮಕ್ಕೆ ಮೊದಲು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾಸರಗೋಡು ಅಶೋಕ್ ಕುಮಾರ್ ಬಹುಮಾನಗಳನ್ನು ವಿತರಿಸಿದರು. ಶ್ರೀರಾಮ ದಿವಾಣ ದಿ. ಗಣಪತಿ ದಿವಾಣ ಅವರ ಕುಕ್ಕುದ ಮರೊ ತುಳು ಕವಿತೆಯನ್ನು ವಾಚಿಸಿದರು. ಪ್ರಕಾಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News