ಬಂಟಕಲ್ಲು: ಬಾನುಲಿ ರೈತ ದಿನಾಚರಣೆ

Update: 2019-02-19 12:45 GMT

ಶಿರ್ವ, ಫೆ.19: ಹಳ್ಳಿಗಳ ರೈತರಿಗೆ ಶೀಘ್ರವಾಗಿ ಕೃಷಿ ಮಾಹಿತಿ ನೀಡುವ ಕಿಸಾನ್‌ವಾಣಿ ಬಾನುಲಿ ಕಾರ್ಯಕ್ರಮ ಅತ್ಯಂತ ಉಪಯುಕ್ತ ಹಾಗೂ ಸಕಾಲಿಕ ವಾಗಿದೆ. ವಾರ್ತಾಪತ್ರಿಕೆಗಳು, ಇನ್ನಿತರ ನಿಯತಕಾಲಿಕಗಳು, ಕೃಷಿಮಾಹಿತಿ ಇಲ್ಲದ ಭಾಗಗಳಲ್ಲಿ ಗ್ರಾಮೀಣ ಕೃಷಿಕರಿಗೆ ಕಿಸಾನ್‌ವಾಣಿ ಬಾನುಲಿ ಕಾರ್ಯ ಕ್ರಮ ಒಂದು ವರದಾನವಾಗಿದೆ ಎಂದು ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಕೆಂಪೇಗೌಡ ಹೇಳಿದ್ದಾರೆ.

ಪ್ರಸಾರ ಭಾರತಿ, ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ಮಂಗಳೂರು ಹಾಗೂ ಶಿರ್ವ ರೋಟರಿ ಕ್ಲಬ್, ಜಿಲ್ಲಾ ಕೃಷಿಕ ಸಂಘಗಳ ಸಹ ಭಾಗಿತ್ವದಲ್ಲಿ ಬಂಟಕಲ್ಲು ರೋಟರಿ ಭವನದಲ್ಲಿ ಇತ್ತೀಚೆಗೆ ಜರಗಿದ ಬಾನುಲಿ ರೈತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಕೆ.ಶೆಟ್ಟಿ ವಹಿಸಿದ್ದರು. ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ದಿಕ್ಸೂಚಿ ಭಾಷಣ ಮಾಡಿದರು. ರೋಟರಿ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮುಖ್ಯ ಅತಿಥಿಗಳಾಗಿದ್ದರು.

ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿ ಎಸ್.ಉಷಾಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕನ್ಸೆಪ್ಟಾ ಫೆೆರ್ನಾಂಡಿಸ್ ಸ್ವಾಗತಿಸಿದರು. ಬಾನುಲಿ ಕಿಸಾನ್‌ವಾಣಿ ವಿಭಾಗದ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿ ಪರ ಕೃಷಿಕ ರಾಘವೇಂದ್ರ ನಾಯಕ್ ಶಿರ್ವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News