ಸಾಧನೆಯಲ್ಲಿ ಪ್ರಪಂಚ ಗೆದ್ದವರು ಶಿವಾಜಿ ಮಹಾರಾಜ: ವೇದವ್ಯಾಸ ಕಾಮತ್

Update: 2019-02-19 12:52 GMT

ಮಂಗಳೂರು, ಫೆ.19: ಮೊಗಲರ ದಬ್ಬಾಳಿಕೆಯಿಂದ ದೇಶವನ್ನು ರಕ್ಷಿಸುವಲ್ಲಿ ಹೋರಾಡಿದ ಶಿವಾಜಿ ಮಹಾರಾಜ ಸಾಧನೆಯಲ್ಲಿ ಪ್ರಪಂಚ ಗೆದ್ದವರು ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 392ನೆ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಗಲರ ದಬ್ಬಾಳಿಕೆಗೆ ತುತ್ತಾಗಿದ್ದ ಭಾರತದ ಪ್ರಜೆಗಳಿಗೆ ಚೈತನ್ಯ ತುಂಬಿದ್ದವರು ಶಿವಾಜಿ ಮಹಾರಾಜರು. ಇದೀಗ ಕರ್ನಾಟಕ ಮರಾಠರು ಹಾಗೂ ಆರ್ಯ ಯಾನೆ ಮರಾಠ ಸಮಾಜಕ್ಕೆ ಸರಕಾರದಿಂದ ಅಗತ್ಯವಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಯತ್ನಿಸುವುದಾಗಿ ಶಾಸಕರು ನುಡಿದರು.

ಮುಂದಿನ ತಮ್ಮ ಶಾಸಕ ನಿಧಿಯಿಂದ 5 ಲಕ್ಷ ರೂ.ಗಳನ್ನು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಹಾಗೂ ಆರ್ಯ ಯಾನೆ ಮರಾಠ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕಾವೂರಿನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅನುದಾನ ನೀಡುವುದಾಗಿ ಹೇಳಿದರು.

ಕಟೀಲು ದುರ್ಗಾ ಪರಮೇಶ್ವರಿ ಪ.ಪೂ. ಕಾಲೇಜಿನ ಪ್ರೊ. ಸುರೇಶ್ ಶಿವಾಜಿ ಮಹಾರಾಜರ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮರಾಠ ಪರಿಷತ್, ಸಮಾಜ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಸುರೇಶ್ ರಾವ್ ಲಾಡ್, ಶ್ರೀಧರ್, ಯತೀಂದ್ರ ಬಹುಮಾನ್, ರಾಜೇಶ್ ಪಾಟೀಲ್, ತಾನೋಜಿ ರಾವ್ ಪವಾರ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಸಾಧನಾ ರಾವ್ ಸಿಂಧ್ಯಾ ಹಾಗೂ ಸುಲ್ಯದ ಕೋಟೆಪೆರಾಜೆ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರಾವ್ ಬಹುಾನ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ ಎ.ವಿ. ಸುರೇಶ್ ರಾವ್ ಕರ್‌ಮೋರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News