‘ಜಾಗತಿಕ ತಾಪಮಾನ’ ಪದವನ್ನು ಬಳಕೆಗೆ ತಂದ ವಿಜ್ಞಾನಿ ನಿಧನ

Update: 2019-02-19 16:45 GMT

ನ್ಯೂಯಾರ್ಕ್, ಫೆ. 19: ಹವಾಮಾನ ಬದಲಾವಣೆ ಬಗ್ಗೆ ಮೊದಲು ಧ್ವನಿ ಎತ್ತಿದ ಹಾಗೂ ‘ಗ್ಲೋಬಲ್ ವಾರ್ಮಿಂಗ್ (ಜಾಗತಿಕ ತಾಪಮಾನ)’ ಪದವನ್ನು ಜನಪ್ರಿಯಗೊಳಿಸಿದ ವಿಜ್ಞಾನಿ ವ್ಯಾಲೇಸ್ ಬ್ರೋಕರ್ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಸುದೀರ್ಘ ಅವಧಿಯಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಹಾಗೂ ಸಂಶೋಧಕರಾಗಿದ್ದ ಅವರು ನ್ಯೂಯಾರ್ಕ್ ನಗರದ ಆಸ್ಪತ್ರೆಯೊಂದರಲ್ಲಿ ಸೋಮವಾರ ಕೊನೆಯುಸಿರೆಳೆದರು ಎಂದು ವಿಶ್ವವಿದ್ಯಾನಿಲಯದ ಲ್ಯಾಮೊಂಟ್-ಡೊಹೆರ್ಟಿ ಅರ್ತ್ ಅಬ್ಸರ್ವೇಟರಿಯ ವಕ್ತಾರರೋರ್ವರು ತಿಳಿಸಿದರು.

ಬ್ರೋಕರ್ 1975ರಲ್ಲಿ ಬರೆದ ಲೇಖನವೊಂದರ ಮೂಲಕ ‘ಗ್ಲೋಬಲ್ ವಾರ್ಮಿಂಗ್’ ಪದವನ್ನು ಬಳಕೆಗೆ ತಂದರು. ವಾತಾವರಣದಲ್ಲಿನ ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ ಮಟ್ಟವು ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ತನ್ನ ಲೇಖನದಲ್ಲಿ ಸರಿಯಾಗಿ ಊಹಿಸಿದ್ದರು.

ಬಳಿಕ, ‘ಓಶನ್ ಕನ್ವೇಯರ್ ಬೆಲ್ಟ್’ ಎಂಬ ಸಮುದ್ರದ ಅಲೆಗಳ ಜಾಲವು ಪರಿಸರದ ಮೇಲೆ ಹೊಂದಿರುವ ಪಾತ್ರವನ್ನು ಮೊದಲ ಬಾರಿಗೆ ಗುರುತಿಸಿದರು. ಇದು (ಓಶನ್ ಕನ್ವೇಯರ್ ಬೆಲ್ಟ್) ಸಮುದ್ರದ ಅಲೆಗಳ ಜಾಗತಿಕ ಜಾಲವಾಗಿದ್ದು, ಗಾಳಿಯ ಉಷ್ಣತೆಯಿಂದ ಹಿಡಿದು ಮಳೆಯ ಮಾದರಿವರೆಗೆ ಪ್ರತಿಯೊಂದರ ಮೇಲೂ ಪರಿಣಾಮ ಬೀರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News