ಕಾಶ್ಮೀರಿಗಳ ಎಲ್ಲವನ್ನೂ ಬಹಿಷ್ಕರಿಸಿ ಎಂದ ಮೇಘಾಲಯ ರಾಜ್ಯಪಾಲ !

Update: 2019-02-19 17:09 GMT

ಶಿಲ್ಲಾಂಗ್, ಫೆ. 19: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯ ಬಳಿಕ ‘ಕಾಶ್ಮೀರಿಗಳ ಎಲ್ಲವನ್ನೂ’ ಬಹಿಷ್ಕರಿಸುವಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಕರೆ ನೀಡಿದ್ದು, ವಿವಾದ ಸೃಷ್ಟಿಯಾಗಿದೆ.

ತನ್ನನ್ನು ಬಲಪಂಥೀಯ ಹಿಂದೂ ಸಾಮಾಜಿಕ-ರಾಜಕೀಯ ಚಿಂತಕ, ಲೇಖಕ, ಸಿದ್ಧಾಂತಿ ಎಂದು ಟ್ವಿಟರ್‌ನಲ್ಲಿ ವಿವರಿಸಿಕೊಂಡಿರುವ ತಥಾಗತ ರಾಯ್, ತನ್ನ ಈ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ.

 “ಕಾಶ್ಮೀರಕ್ಕೆ ಭೇಟಿ ನೀಡಬೇಡಿ, ಮುಂದಿನ ಎರಡು ವರ್ಷ ಅಮರನಾಥ್‌ಗೆ ಭೇಟಿ ನೀಡಬೇಡಿ. ಕಾಶ್ಮೀರಿ ಎಂಪೋರಿಯಾ ಅಥವಾ ಕಾಶ್ಮೀರಿ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಬೇಡಿ. ಕಾಶ್ಮೀರಿಗಳ ಎಲ್ಲವನ್ನೂ ಬಹಿಷ್ಕರಿಸಿ ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್ ಮನವಿ ಮಾಡಿರುವುದನು ನಾನು ಒಪ್ಪಿಕೊಳ್ಳುತ್ತೇನೆ” ಎಂದು ತಥಾಗತ ರಾಯ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News