ಡೀಸೆಲ್‌ನಿಂದ ವಿದ್ಯುತ್‌ಗೆ ಪರಿವರ್ತಿತ ಮೊದಲ ರೈಲು ಸಂಚಾರಕ್ಕೆ ಪ್ರಧಾನಿ ಚಾಲನೆ

Update: 2019-02-19 17:14 GMT

ವಾರಣಾಸಿ, ಫೆ. 19: ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಕ್ಷೇತ್ರವಾದ ವಾರಣಾಸಿಯಲ್ಲಿರುವ ಡೀಸೆಲ್ ಲೊಕೊಮೋಟಿವ್ಸ್ ವರ್ಕ್ಸ್‌ನಲ್ಲಿ ಡೀಸೆಲ್‌ನಿಂದ ವಿದ್ಯುತ್‌ಗೆ ಪರಿವರ್ತಿಸಲಾದ ರೈಲಿಗೆ ಚಾಲನೆ ನೀಡಿದರು.

ಬ್ರಾಡ್‌ಗೇಜ್ ಜಾಲವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ಕ್ರಮದ ಒಂದು ಭಾಗವಾಗಿ ಭಾರತೀಯ ರೈಲ್ವೆ ಮೊದಲ ಬಾರಿಗೆ ಡೀಸೆಲ್ ರೈಲನ್ನು ವಿದ್ಯುತ್ ರೈಲಾಗಿ ಪರಿವರ್ತಿಸಿದೆ. ಇಲ್ಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಡೀಸೆಲ್ ಲೊಕೋಮೋಟಿವ್ ವರ್ಕ್ಸ್‌ಗೆ ತೆರಳಿ ವಿದ್ಯುತ್ ರೈಲಿಗೆ ಚಾಲನೆ ನೀಡಿದರು. ಅಲ್ಲದೆ ಎಂಜಿನ್‌ನ ಒಳಗಡೆ ಪ್ರವೇಶಿಸಿ ಪರಿಶೀಲನೆ ನಡೆಸಿದರು. ಡೀಸೆಲ್ ರೈಲನ್ನು ವಿದ್ಯುತ್ ರೈಲಾಗಿ ಪರಿವರ್ತಿಸುವ ಯೋಜನೆ 2017 ಡಿಸೆಂಬರ್ 22ರಂದು ಆರಂಭಿಸಲಾಗಿತ್ತು. ಆದರೆ

ಡೀಸೆಲ್ ರೈಲನ್ನು ವಿದ್ಯುತ್ ರೈಲಾಗಿ ಪರಿವರ್ತಿಸುವ ಈ ಪರಿಕಲ್ಪನೆಯನ್ನು ಕೇವಲ 69 ದಿನಗಳಲ್ಲಿ ಸಾಕಾರಗೊಳಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶೇ. 100 ವಿದ್ಯುತ್ತೀಕರಣ ಹಾಗೂ ಕಾರ್ಬನ್ ನಿವಾರಿಸುವ ಉದ್ದೇಶದಿಂದ  ಭಾರತೀಯ ರೈಲ್ವೇ ಡೀಸೆಲ್ ರೈಲನ್ನು ವಿದ್ಯುತ್ ರೈಲನ್ನಾಗಿ ಪರಿವರ್ತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News