ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕರಾಗಿ ಮಸಕಝ

Update: 2019-02-19 17:57 GMT

ಹರಾರೆ, ಫೆ.19: ಮುಂದಿನ ವರ್ಷದಿಂದ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಮೂರೂ ವಿಭಾಗಗಳಿಗೆ ಝಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಹ್ಯಾಮಿಲ್ಟನ್ ಮಸಕಝ ಅವರನ್ನು ಹೆಸರಿಸಲಾಗಿದೆ. ಮುಂದಿನ ತಿಂಗಳು ಭಾರತದ ಪ್ರವಾಸ ಕೈಗೊಳ್ಳಲು ಯೋಚಿಸಿದ್ದ ಝಿಂಬಾಬ್ವೆ ಅದನ್ನು ಕೈಬಿಡುವ ಸಾಧ್ಯತೆಯಿದೆ. ಅಲ್ಲದೆ ಜುಲೈಗಿಂತ ಮೊದಲು ಯಾವುದೇ ಪಂದ್ಯಾವಳಿಯಲ್ಲಿ ಝಿಂಬಾಬ್ವೆ ಭಾಗವಹಿಸುತ್ತಿಲ್ಲ.

ಮಸಕಝ ಅವರನ್ನು 2019-20ರ ಋತುವಿಗೆ ನಾಯಕರಾಗಿ ಆಯ್ಕೆ ಮಾಡಿದ್ದು, ಪೀಟರ್ ಮೂರ್ ಉಪನಾಯಕನ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್‌ನ ಹೇಳಿಕೆ ತಿಳಿಸಿದೆ.

35 ವರ್ಷದ ಮಸಕಝ ತಂಡವನ್ನು ಮೂರು ಟೆಸ್ಟ್, 20 ಏಕದಿನ ಹಾಗೂ 11 ಟಿ-20 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ ಅನುಭವಿಯಾಗಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ತಂಡದ ನಾಯಕನಾಗಿದ್ದ ಗ್ರೇಮ್ ಕ್ರೀಮರ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ತಂಡವನ್ನು ತೊರೆದಿದ್ದರಿಂದ ದ.ಆಫ್ರಿಕ ಹಾಗೂ ಬಾಂಗ್ಲಾ ವಿರುದ್ಧ ಸರಣಿಗೆ ಮಸಕಝ ಅವರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News