ಕಾಶಿಪಟ್ಣ: ಎಸ್ಕೆಎಸ್ಸೆಸ್ಸೆಫ್ ನೂತನ ಕಾರ್ಯಾಲಯ ಉದ್ಘಾಟನೆ

Update: 2019-02-20 05:07 GMT

ಮೂಡುಬಿದಿರೆ, ಫೆ.20: ಎಸ್ಕೆಎಸ್ಸೆಸ್ಸೆಫ್ ಕಾಶಿಪಟ್ಣ ಯೂನಿಟ್ ಇದರ ನೂತನ ಶಾಖೆಯ ಕಚೇರಿ ಉದ್ಘಾಟನಾ ಸಮಾರಂಭ ಕಾಶಿಪಟ್ಣ ಮುಹಿಯದ್ದೀನ್ ಜುಮಾ ಮಸೀದಿ ವಠಾರದಲ್ಲಿರುವ ಎಸ್ಕೆಎಸ್ಸೆಸ್ಸೆಫ್ ನೂತನ‌ ಕಟ್ಟಡದಲ್ಲಿ ನಡೆಯಿತು.

 ಕೊಡಗು ಜಿಲ್ಲಾ ಸಹಾಯಕ ಖಾಝಿ ಎಂ.ಎಂ.‌ಅಬ್ದುಲ್ಲಾ ಫೈಝಿ ಕಾರ್ಯಾಲಯವನ್ನು ಉದ್ಘಾಟಿಸಿದರು. 

 ಕಾಶಿಪಟ್ಣ ಖತೀಬ್ ಶಾಫಿ ರಹ್ಮಾ ಮುಸ್ಲಿಯಾರ್ ದುಆ ನೆರವೇರಿಸಿದರು. ಮದ್ರಸಾ ಅಧ್ಯಾಪಕ ರಝಾಕ್ ಮುಸ್ಲಿಯಾರ್ ಅಗ್ರಹಾರ ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ಕಾಶಿಪಟ್ಣ ಯೂನಿಟ್ ‌ಅಧ್ಯಕ್ಷ ಪಿ.ಎಚ್.ಅಬ್ದುಲ್ ರಹಿಮಾನ್ ಕಾಶಿಪಟ್ಣ ಸ್ವಾಗತಿಸಿದರು.  ಕಾರ್ಯದರ್ಶಿ ಕೆ.ಎನ್.ಶರಫುದ್ದೀನ್ ಕಾಶಿಪಟ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News