ಪುಲ್ವಾಮದಾಳಿ: ಜಮ್ಮುಕಾಶ್ಮೀರ ಪೊಲೀಸರಿಂದ ತನಿಖೆ ಕೈಗೆತ್ತಿಕೊಂಡ ಎನ್‌ಐಎ

Update: 2019-02-20 16:50 GMT

ಹೊಸದಿಲ್ಲಿ, ಫೆ. 20: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14ರಂದು ನಡೆದ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಕೈಗೆತ್ತಿಕೊಂಡಿದೆ.

40 ಯೋಧರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿ ಪ್ರಕರಣದ ಬಗ್ಗೆ ಎನ್‌ಐಎ ಮತ್ತೆ ಪ್ರಕರಣ ದಾಖಲಿಸಿಕೊಂಡಿದೆ ಹಾಗೂ ತನಿಖೆ ನಡೆಸಲು ತಂಡವೊಂದನ್ನು ರೂಪಿಸಿದೆ ಎಂದು ಎನ್‌ಐಎಯ ವಕ್ತಾರ ತಿಳಿಸಿದ್ದಾರೆ.

ರಾಜ್ಯ ಪೊಲೀಸರು ಅವಂತಿಪುರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 14ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆತ್‌ಪೋರಾದ ಸ್ಫೋಟ ಸಂಭವಿಸಿದ ಪ್ರದೇಶದಿಂದ ಸ್ಫೋಟ ಅವಶೇಷಗಳನ್ನು ಎನ್‌ಐಎ ಈಗಾಗಲೇ ಸಂಗ್ರಹಿಸಿದೆ. ಪೊಲೀಸರು ವಶಕ್ಕೆ ತೆಗೆದುಕೊಂಡ 12ಕ್ಕೂ ಅಧಿಕ ಜನರನ್ನು ಎನ್‌ಐಎ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರಾವೆಗಳಿಗಾಗಿ ಎನ್‌ಐಎ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳು, ಬೇಹುಗಾರಿಕೆ ಸಂಸ್ಥೆ ಹಾಗೂ ಸೇನಾ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News