ಯಮುನಾ ನದಿಗೆ ಕೊಳಚೆ ನೀರು: ಕ್ರಿಯಾಯೋಜನೆ ರೂಪಿಸಲು ಎನ್‌ಜಿಟಿ ಆಗ್ರಹ

Update: 2019-02-20 16:50 GMT

ಹೊಸದಿಲ್ಲಿ,ಫೆ.20: ಯಮುನಾ ನದಿಗೆ ಕೊಳಚೆ ನೀರನ್ನು ಹರಿಸುವುದನ್ನು ತಡೆಯಲು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸೂಕ್ತ ಕ್ರಿಯಾ ಯೋಜನೆಯನ್ನು ರಚಿಸುವಂತೆ ಸಿಪಿಸಿಬಿ ನೇತೃತ್ವದ ಸಮಿತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀರಣ ಸೂಚಿಸಿದೆ.

ಒಂದು ತಿಂಗಳ ಒಳಗಾಗಿ ಈ ಕುರಿತು ಜಂಟಿ ಸಭೆ ನಡೆಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ, ದಿಲ್ಲಿ ಜಲ ಮಂಡಳಿ, ಪೂರ್ವ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್, ನೊಯ್ಡಾ ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ಆದೇಶಿಸಿದೆ.

ಗೌತಮ ಬುದ್ಧ ನಗರ ಜಿಲ್ಲೆಯ ಸೆಕ್ಟರ್ 137ರಲ್ಲಿ ಕೊಳಚೆ ನೀರನ್ನು ನೀರಾವರಿ ಕಲುವೆಗೆ ಹರಿಸುವುದರ ವಿರುದ್ಧ ನೊಯ್ಡ ನಿವಾಸಿ ಅಭಿಷ್ಟ್ ಕುಸುಮ್ ಗುಪ್ತಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News