ಭಾರತ-ಪಾಕ್ ವಿಶ್ವಕಪ್ ಪಂದ್ಯ: ಟಿಕೆಟ್‌ಗಾಗಿ 4 ಲಕ್ಷಕ್ಕೂ ಅಧಿಕ ಅರ್ಜಿ!

Update: 2019-02-20 17:34 GMT

ಲಂಡನ್, ಫೆ.20: ಭಾರತ-ಪಾಕಿಸ್ತಾನ ಮಧ್ಯೆ ಜೂ.16ರಂದು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ವಿಶ್ವಕಪ್ ಏಕದಿನ ಪಂದ್ಯವನ್ನು ಬಹಿಷ್ಕರಿಸಬೇಕೆಂಬ ಬಲವಾದ ಬೇಡಿಕೆ ಭಾರತದಲ್ಲಿ ವ್ಯಕ್ತವಾಗಿದೆ. ಈ ನಡುವೆ ಈ ಎರಡು ತಂಡಗಳ ಪಂದ್ಯದ ಆತಿಥ್ಯವಹಿಸಿರುವ 25,000 ಸೀಟುಗಳ ಸಾಮರ್ಥ್ಯದ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಟಿಕೆಟ್‌ಗಾಗಿ 4 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಟೂರ್ನಿಯ ನಿರ್ದೇಶಕರು ತಿಳಿಸಿದ್ದಾರೆ.

ಹರ್ಭಜನ್ ಸಿಂಗ್‌ರಂತಹ ಭಾರತದ ಪ್ರಮುಖ ಕ್ರಿಕೆಟಿಗರು ಪಾಕ್ ವಿರುದ್ಧ ವಿಶ್ವಕಪ್‌ನ ಗ್ರೂಪ್ ಪಂದ್ಯ ಬಹಿಷ್ಕರಿಸಬೇಕೆಂದು ಆಗ್ರಹಿಸುತ್ತಿದ್ದರೆ, ಇಡೀ ಟೂರ್ನಿಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿ ಐಸಿಸಿ ಮೇಲೆ ಒತ್ತಡ ತಂತ್ರ ಅನುಸರಿಸಬೇಕೆಂದು ಚೇತನ್ ಚೌಹಾಣ್‌ರಂತಹ ಹಿರಿಯರು ಆಗ್ರಹಿಸುತ್ತಿದ್ದಾರೆ.

ಭಾರತ-ಪಾಕ್ ಮಧ್ಯೆ ನಡೆಯಲಿರುವ ಗ್ರೂಪ್ ಪಂದ್ಯದ ಟಿಕೆಟ್‌ಗಾಗಿ ಆಸ್ಟ್ರೇಲಿಯ-ಇಂಗ್ಲೆಂಡ್‌ ಮಧ್ಯೆದ ಪಂದ್ಯ ಅಥವಾ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್ ಪಂದ್ಯಕ್ಕಿಂತ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಆ ಒಂದು ನಿರ್ದಿಷ್ಟ ಪಂದ್ಯಕ್ಕೆ(ಭಾರತ-ಪಾಕ್)4 ಲಕ್ಷಕ್ಕೂ ಅಧಿಕ ಅರ್ಜಿ ಬಂದಿವೆೆ. ಸ್ಟೇಡಿಯಂನ ಸಾಮರ್ಥ್ಯ 25,000. ಹಾಗಾಗಿ ಹಲವು ಜನರು ನಿರಾಸೆ ಅನುಭವಿಸಲಿದ್ದಾರೆ. ಇದು ಕೇವಳ ಸ್ಥಳೀಯ ವಿಚಾರವಾದರೆ, ಜಾಗತಿಕವಾಗಿ ಇನ್ನಷ್ಟು ಪ್ರೇಕ್ಷಕರಿದ್ದಾರೆ ಎಂದು ಐಸಿಸಿ ವಿಶ್ವಕಪ್ ಟೂರ್ನಿಯ ನಿರ್ದೇಶಕ ಸ್ಟೀವ್ ಎಲ್‌ವರ್ದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News