850 ಭಾರತೀಯ ಕೈದಿಗಳ ಬಿಡುಗಡೆ: ಸೌದಿ ಯುವರಾಜ ಸಲ್ಮಾನ್ ಆದೇಶ

Update: 2019-02-20 18:27 GMT

ಹೊಸದಿಲ್ಲಿ, ಫೆ.20: ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ತನ್ನ ರಾಷ್ಟ್ರದ ಜೈಲುಗಳಲ್ಲಿರುವ 850 ಭಾರತೀಯರ ಬಿಡುಗಡೆಗೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಕೈದಿಗಳ ಬಿಡುಗಡೆಯ ಆದೇಶದ ಜೊತೆಗೆ ಮೋದಿಯವರ ಮನವಿಯ ಮೇರೆಗೆ ಭಾರತೀಯ ಹಜ್ ಯಾತ್ರಿಗಳ ಕೋಟಾವನ್ನು ಎರಡು ಲಕ್ಷಕ್ಕೆ ಹೆಚ್ಚಿಸಿರುವುದಾಗಿಯೂ ಸಲ್ಮಾನ್ ಪ್ರಕಟಿಸಿದ್ದಾರೆ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News