ಚಟ್ಟೆಕ್ಕಲ್: ಫೆ.22ರಿಂದ 7ನೇ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ

Update: 2019-02-21 06:14 GMT

ಬಂಟ್ವಾಳ, ಫೆ.21: ಸಜಿಪ ಚಟ್ಟೆಕ್ಕಲ್ ನ ಜಲಾಲಿಯ್ಯ ಜುಮಾ ಮಸ್ಜಿದ್ ವತಿಯಿಂದ ಜರುಗುವ 7ನೇ ಜಲಾಲಿಯ್ಯ ಮಜ್ಲಿಸ್ ನ ವಾರ್ಷಿಕ ಕಾರ್ಯಕ್ರಮವು ಫೆ.22 ರಿಂದ 28ರವರೆಗೆ ನಡೆಯಲಿದೆ.

ಫೆ.22ರಂದು ಸ್ವಲಾತ್ ವಾರ್ಷಿಕ ನಡೆಯಲಿದ್ದು, ಅಸ್ಸೈಯದ್ ಕೂರತ್ ತಂಙಳ್ ನೇತೃತ್ವ ನೀಡಲಿದ್ದಾರೆ. ಫೆ.23ರಂದು ಕುತುಬಿಯ್ಯತ್ ಜಿಸ್ತಿಯಾ ಕಾರ್ಯಕ್ರಮ ಜರುಗಲಿದ್ದು, ಸೈಯದ್ ಯು.ಪಿ.ಎಸ್.ಕಾಸಿಂ ತಂಙಳ್ ಹಾಗೂ ಮುಹಮ್ಮದ್ ಅಲಿ ಮದನಿ ಕೋಯಿಕ್ಕೋಡ್ ಪಾಲ್ಗೊಳ್ಳಲಿದ್ದಾರೆ. ಫೆ.24ರಂದು ಬೆಳಗ್ಗೆ ಮೆಡಿಕಲ್ ಕ್ಯಾಂಪ್ ಹಾಗೂ ಫೆ.25ರಂದು ಸೈಯದ್ ಆದೂರು ತಂಙಳ್ ದುಆ ನೇತೃತ್ವದೊಂದಿಗೆ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಪ್ರವಚನ ನೀಡಲಿದ್ದಾರೆ.

ಫೆ.26ರಂದು ಸೈಯದ್ ತ್ವಾಹ ತಂಙಳ್ ನೇತೃತ್ವದಲ್ಲಿ ಬುರ್ದಾ  ಮಜ್ಲಿಸ್ ಜರುಗಲಿದೆ. ಫೆ.27ರಂದು ಉಮರ್ ಮುಸ್ಲಿಯಾರ್ ಮರ್ಧಾಳ ಪ್ರವಚನ ನೀಡಲಿದ್ದು, ಸೈಯದ್ ಶಹೀರ್ ತಂಙಳ್ ಮಳ್ಹರ್ ದುಆಗೆ ನೇತೃತ್ವ ನೀಡಲಿದ್ದಾರೆ.

ಸಮಾರೋಪ ದಿನವಾದ ಫೆ.28 ರಂದು ಸೈಯದ್ ಚಟ್ಟೆಕ್ಕಲ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ. ಬಳಿಕ ಪೇರೋಡ್ ಮುಹಮ್ಮದ್ ಅಝ್ಹರಿ ಪ್ರವಚನ ನೀಡಲಿದ್ದು, ಸೈಯದ್ ಸುಹೈಲ್ ತಂಙಳ್ ಕಣ್ಣೂರು ದುಆಗೆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News