ಅದಾನಿ ಸಮೂಹದ ಆಸ್ಪತ್ರೆಯಲ್ಲಿ 5 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಮಕ್ಕಳ ಸಾವು

Update: 2019-02-21 09:53 GMT

ಗಾಂಧಿನಗರ, ಫೆ.21: ಅದಾನಿ ಫೌಂಡೇಷನ್ ಗುಜರಾತ್‍ ನ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ನಡೆಸುವ ಜಿಕೆ ಜನರಲ್ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಲ್ಲಿ 1000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ರಾಜ್ಯ ವಿಧಾನಸಭೆಗೆ ಬುಧವಾರ ತಿಳಿಸಿದೆ.

ಕಾಂಗ್ರೆಸ್ ಪಕ್ಷದ ಸಂತೋಕ್‍ ಬೆನ್ ಅರೇತಿಯಾ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು, "ಕಳೆದ 5 ವರ್ಷಗಳಲ್ಲಿ ಅದಾನಿ ಫೌಂಡೇಷನ್ ಆಸ್ಪತ್ರೆಯಲ್ಲಿ 1018 ಮಕ್ಕಳು ಅಸು ನೀಗಿವೆ" ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಖಾತೆಯನ್ನೂ ನಿರ್ವಹಿಸುತ್ತಿರುವ ಪಟೇಲ್ ನೀಡಿದ ಮಾಹಿತಿಯ ಅನ್ವಯ, 2014-15ರಲ್ಲಿ 118, 2015-16ರಲ್ಲಿ 187, 2016-17ರಲ್ಲಿ 208, 2017-18ರಲ್ಲಿ 276 ಹಾಗೂ ಪ್ರಸಕ್ತ ವರ್ಷದಲ್ಲಿ ಇದುವರೆಗೆ 159 ಮಕ್ಕಳು ವಿವಿಧ ಕಾಯಿಲೆಗಳಿಂದ ಮತ್ತು ವೈದ್ಯಕೀಯ ಸಂಕೀರ್ಣತೆಗಳಿಂದ ಮೃತಪಟ್ಟಿದ್ದಾರೆ.

ಈ ಸಾವಿನ ಕಾರಣಗಳನ್ನು ಪತ್ತೆ ಮಾಡಲು ಕಳೆದ ಮೇ ತಿಂಗಳಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ ಎಂದು ಪಟೇಲ್ ವಿವರಿಸಿದರು. ಮಕ್ಕಳ ಸಾವಿಗೆ ವಿವಿಧ ಕಾರಣಗಳನ್ನು ಈ ಸಮಿತಿ ಪತ್ತೆ ಮಾಡಿದೆ. ಇದರಲ್ಲಿ ಅವಧಿಪೂರ್ವ ಪ್ರಸವ, ಸೋಂಕು ಕಾಯಿಲೆಗಳು, ಉಸಿರಾಟ ಸಮಸ್ಯೆ, ಜನ್ಮದತ್ತ ಆಸ್ಪೇಕ್ಸಿಯಾ, ಸಪ್‍ಸಿಸ್ ಕಾರಣ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News