ಕಾಂಗ್ರೆಸ್ ರಾಷ್ಟ್ರೀಯ ಭದ್ರತೆ ಕಾರ್ಯಪಡೆಗೆ ‘ಸರ್ಜಿಕಲ್ ಸ್ಟ್ರೈಕ್ ಹೀರೋ’ ಡಿ.ಎಸ್.ಹೂಡಾ ನೇತೃತ್ವ

Update: 2019-02-21 16:06 GMT

ಹೊಸದಿಲ್ಲಿ,ಫೆ.21: 2016ರ ಸರ್ಜಿಕಲ್ ದಾಳಿಯ ಉಸ್ತುವಾರಿ ವಹಿಸಿದ್ದ ಲೆ.ಜ.(ನಿವೃತ್ತ) ದೀಪೇಂದ್ರ ಸಿಂಗ್ ಹೂಡಾ ಅವರು ರಾಷ್ಟ್ರೀಯ ಭದ್ರತೆ ಕುರಿತು ಕಾಂಗ್ರೆಸ್ ಕಾರ್ಯಪಡೆಯ ನೇತೃತ್ವ ವಹಿಸಲಿದ್ದಾರೆ.

 ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ರಚಿಸಿರುವ,ನಿವೃತ್ತ ಪೊಲೀಸ್ ಮತ್ತು ಸೇನಾಧಿಕಾರಿಗಳನ್ನು ಒಳಗೊಂಡಿರುವ ಈ ಕಾರ್ಯಪಡೆಯು ಆಯ್ದ ತಜ್ಞರ ಗುಂಪಿನೊಂದಿಗೆ ಸಮಾಲೋಚಿಸಿ ದೇಶದ ಭದ್ರತೆಗೆ ಸವಾಲುಗಳ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಲಿದೆ. ಒಂದು ತಿಂಗಳೊಳಗೆ ಈ ವರದಿಯನ್ನು ಸಿದ್ಧಗೊಳಿಸುವಂತೆ ಹೂಡಾ ಅವರಿಗೆ ಸೂಚಿಸಲಾಗಿದೆ.

 ಹೂಡಾ ಅವರು ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್‌ನ ಮಾಜಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದಾರೆ. ಸರ್ಜಿಕಲ್ ದಾಳಿ ಸಂದರ್ಭದಲ್ಲಿ ಅವರು ನಾರ್ದರ್ನ್ ಸೇನಾ ಕಮಾಂಡರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News