ಅರಣ್ಯದಿಂದ ಹೊರ ಹಾಕಲ್ಪಡಲಿವೆ 10 ಲಕ್ಷ ಬುಡಕಟ್ಟು ಕುಟುಂಬಗಳು

Update: 2019-02-21 16:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ. 21: ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಸೇರಿದ ಜನರು ಹಾಗೂ ಆದಿವಾಸಿ ಕುಟುಂಬಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಇತರ ಅರಣ್ಯ ನಿವಾಸಿಗಳು ಸಲ್ಲಿಸಿದ 11,72,931 ಭೂ ಒಡೆತನ ಪ್ರತಿಪಾದನೆಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಲ್ಲಿ ಸಲ್ಲಿಸಿದ ಅಫಿದಾವಿತ್‌ನಲ್ಲಿ ಹೇಳಿದೆ.

ಕಾಯ್ದೆ ಪ್ರಕಾರ 2005 ಡಿಸೆಂಬರ್ 31ಕ್ಕಿಂತ ಹಿಂದೆ ಕನಿಷ್ಠ ಮೂರು ತಲೆಮಾರು ಅರಣ್ಯ ಭೂಮಿಯಲ್ಲಿ ಜೀವಿಸಿದ ಅರಣ್ಯ ನಿವಾಸಿಗಳು ಭೂ ಹಕ್ಕಿಗೆ ಅರ್ಹರು.

 ಜುಲೈ 12ರ ಒಳಗೆ ತೆರವು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ಸುಪ್ರೀಂ ಕೋರ್ಟ್ 17 ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಅತಿಕ್ರಮಿಗಳನ್ನು ತೆರವುಗೊಳಿಸಿದ ಬಳಿಕ ಸೆಟಲೈಟ್ ಇಮೇಜ್ ಅನ್ನು ಸಲ್ಲಿಸಿ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾಕ್ಕೆ ನಿರ್ದೇಶಿಸಿದೆ.

 17 ರಾಜ್ಯಗಳಲ್ಲಿ ಮಧ್ಯಪ್ರದೇಶ, ಕರ್ನಾಟಕ ಹಾಗೂ ಒಡಿಶಾ ಒಟ್ಟು ಶೇ. 20ರಷ್ಟು ಭೂ ಒಡೆತನವನ್ನು ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News