ಕ್ಯಾಚ್ ಪಡೆದು ಗಿನ್ನೆಸ್ ದಾಖಲೆ ನಿರ್ಮಿಸಿದ ಆಸಿಸ್ ಕ್ರಿಕೆಟ್ ಆಟಗಾರ್ತಿ

Update: 2019-02-21 16:37 GMT

ಮೆಲ್ಬೋರ್ನ್, ಫೆ.21: ಆಸ್ಟ್ರೇಲಿಯದ ಮಹಿಳಾ ವಿಕೆಟ್‌ ಕೀಪರ್ ಅಲಿಸ್ಸಾ ಹೀಲಿಯವರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ)ಅತ್ಯಂತ ಎತ್ತರದಿಂದ ಬಂದ ಚೆಂಡನ್ನು ಹಿಡಿಯುವ ಮೂಲಕ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದರು.

ಎಂಸಿಜಿಯಲ್ಲಿ 80 ಮೀ. ಎತ್ತರದಿಂದ ಡ್ರೋನ್ ಮೂಲಕ ಎಸೆದ ಕ್ರಿಕೆಟ್ ಚೆಂಡನ್ನು ತನ್ನ ಮೂರನೇ ಪ್ರಯತ್ನದಲ್ಲಿ ಹೀಲಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.

ಹೀಲಿ 62 ಮೀ. ಎತ್ತರದಿಂದ ಬಿದ್ದ ಚೆಂಡನ್ನು ಕ್ಯಾಚ್ ಪಡೆದಿರುವ ಇಂಗ್ಲೆಂಡ್‌ನ ಕ್ರಿಸ್ಟನ್ ಬೌಮ್‌ಗಾರ್ಟ್ನರ್ ದಾಖಲೆಯನ್ನು ಮುರಿದರು. ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ 49 ಮೀಟರ್ ಎತ್ತರದಿಂದ ಬಂದ ಕ್ಯಾಚ್‌ನ್ನು ಪಡೆದು ದಾಖಲೆ ನಿರ್ಮಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News