ಪಾಕ್ ವಿರುದ್ಧ ಭಾರತ ವಿಶ್ವಕಪ್ ಪಂದ್ಯ ಬಹಿಷ್ಕರಿಸಿದರೆ ಬಿಸಿಸಿಐ ನಿಷೇಧ ಸಾಧ್ಯತೆ

Update: 2019-02-21 16:46 GMT

ಹೊಸದಿಲ್ಲಿ, ಫೆ.21: ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಒಂದು ವೇಳೆ ಮುಂಬರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಬಿಸಿಸಿಐ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಪಾಕ್ ಮೂಲದ ಉಗ್ರರು ಆತ್ಮಾಹುತಿ ದಾಳಿ ನಡೆಸಿ 40 ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದ ಬಳಿಕ ವಿಶ್ವಕಪ್‌ ನಲ್ಲಿ ಪಾಕ್ ವಿರುದ್ಧ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕೆಂಬ ಬೇಡಿಕೆ ಎಲ್ಲ ಕಡೆಯಿಂದಲೂ ಕೇಳಿಬರುತ್ತಿದೆ. ಆದರೆ, ಸರಕಾರಿ ಮೂಲಗಳ ಪ್ರಕಾರ, ಇಂತಹ ಕ್ರಮ ಭಾರತಕ್ಕೆ ತಿರುಗುಬಾಣವಾಗಲಿದೆ.

“ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ದೂರ ತಳ್ಳುವ ಭರದಲ್ಲಿ ನಾವೂ ದೂರವಾಗಬಾರದು. ನಾವು ಪಾಕಿಸ್ತಾನ ವಿರುದ್ಧ ನಮ್ಮ ತಂಡವನ್ನು ಕಣಕ್ಕಿಳಿಸದೇ ಇದ್ದರೆ, ಪಾಕ್ ತಂಡಕ್ಕೆ ವಾಕ್ ಓವರ್ ನೀಡಬೇಕಾಗುತ್ತದೆ. ಆಗ ಭಾರತ 2 ಅಂಕ ನಷ್ಟ ಅನುಭವಿಸುತ್ತದೆ. ಐಸಿಸಿ ನಮ್ಮ ವಿರುದ್ಧ ಶಿಕ್ಷೆಯ ಕ್ರಮ ಕೈಗೊಳ್ಳಬಹುದು. ಬಿಸಿಸಿಐ ಮೇಲೆ ಐಸಿಸಿ ನಿಷೇಧ ಹೇರಲೂಬಹುದು. ಇನ್ನು ಸಾಕಷ್ಟು ಸಮಯವಿದೆ. ನಾವು ಈಗಲೇ ಅವಸರದ ಪ್ರತಿಕ್ರಿಯೆ ನೀಡುವುದು ಬೇಡ” ಎಂದು ಸರಕಾರಿ ಮೂಲಗಳು ಬಿಸಿಸಿಐಗೆ ಸಲಹೆ ನೀಡಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News