ಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ ಎಂಬ ಧೋರಣೆ ವಿಪರ್ಯಾಸಕರ: ಚಿದಂಬರಂ

Update: 2019-02-21 17:21 GMT

ಹೊಸದಿಲ್ಲಿ, ಫೆ.21: ಕಾಶ್ಮೀರವು ಭಾರತದ ಭಾಗವಾಗಿರಬೇಕು ಎಂದು ಆಗ್ರಹಿಸುತ್ತಿರುವ ಕೆಲವರು ಕಾಶ್ಮೀರಿಗಳು ಭಾರತದ ಭಾಗವಾಗಿರುವುದನ್ನು ಬಯಸುತ್ತಿಲ್ಲ. ಇಂತಹ ವಿಪರ್ಯಾಸ ಪರಿಸ್ಥಿತಿ ಕಂಡಾಗ ಬೇಸರವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ತಮ್ಮ ರಾಜ್ಯದಲ್ಲಿ ಕಾಶ್ಮೀರದ ಉತ್ಪನ್ನಗಳನ್ನು ಬಹಿಷ್ಕರಿಸಲಾಗುವುದು ಮತ್ತು ಕಾಶ್ಮೀರಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡುವುದು ಬೇಡ ಎಂಬ ಮೇಘಾಲಯದ ರಾಜ್ಯಪಾಲ ತಥಾಗತ ರಾಯ್ ಅವರ ಹೇಳಿಕೆಯನ್ನು ಟೀಕಿಸಿದ ಅವರು, ಕಾಶ್ಮೀರಿಗಳಿಗೆ ದೇಶದಲ್ಲಿ ಸ್ಥಳವಿಲ್ಲ ಎಂಬ ಮೇಘಾಲಯದ ರಾಜ್ಯಪಾಲರ ಸಹಿತ ಹಲವರ ಹೇಳಿಕೆಯನ್ನು ಗುಜರಾತ್‌ನ ಸರ್ದಾರ್ ಸರೋವರ್ ಅಣೆಕಟ್ಟಿನ ಬಳಿ ನಿರ್ಮಿಸಲಾಗಿರುವ ಪಟೇಲರ ‘ಏಕತೆಯ ಪ್ರತಿಮೆ’ಯು ಗಮನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ಡೆಹ್ರಾಡೂನ್, ಜಮ್ಮು, ಕೋಲ್ಕತಾ, ಮುಝಪ್ಫರ್‌ನಗರ ಸೇರಿದಂತೆ ಹಲವೆಡೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿರುವ ಘಟನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹುಟ್ಟೂರಿಗೆ ತೆರಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News