ಯೋಧರನ್ನು ಕಡೆಗಣಿಸಿದ ಮೋದಿಯ ನವಭಾರತದಲ್ಲಿ ಅಂಬಾನಿಗೆ 30 ಸಾವಿರ ಕೋಟಿ ರೂ. : ರಾಹುಲ್ ಟೀಕೆ

Update: 2019-02-21 17:25 GMT

ಹೊಸದಿಲ್ಲಿ, ಫೆ.21: ಮೋದಿಯ ನವಭಾರತದಲ್ಲಿ ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ದೇಶದ ಯೋಧರಿಗೆ ಹುತಾತ್ಮ ಮಾನ್ಯತೆ ದೊರಕುತ್ತಿಲ್ಲ, ಆದರೆ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಸಿಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

 ಧೀರ ಯೋಧರು ಮೃತರಾಗಿದ್ದಾರೆ. ಅವರ ಕುಟುಂಬದವರು ತೊಂದರೆಯಲ್ಲಿದ್ದಾರೆ. ಆದರೆ ಮೃತ ಯೋಧರಿಗೆ ಹುತಾತ್ಮರ ಮಾನ್ಯತೆಯನ್ನು ನಿರಾಕರಿಸಲಾಗಿದೆ. ಯಾರಿಗೂ ಏನನ್ನೂ ನೀಡದ, ಆದರೆ ಪಡೆಯುವುದಷ್ಟೇ ತಿಳಿದಿರುವ ಮೋದಿ ಸರಕಾರ ಅನಿಲ್ ಅಂಬಾನಿಗೆ ಮಾತ್ರ ರಫೇಲ್ ಒಪ್ಪಂದದ ನೆಪದಲ್ಲಿ 30 ಸಾವಿರ ಕೋಟಿ ರೂ. ಕೊಡುಗೆ ನೀಡಿದ್ದಾರೆ. ಮೋದಿಯ ನವಭಾರತಕ್ಕೆ ಸ್ವಾಗತ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

 ರಿಲಯನ್ಸ್ ಕಮ್ಯುನಿಕೇಶನ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಎಸಗಿರುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ ಎಂಬ ಮಾಧ್ಯಮದ ವರದಿಯನ್ನು ಈ ಬರಹದ ಜೊತೆಗೆ ಟ್ಯಾಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News