ಮೇವು ಹಗರಣ: ಜಾಮೀನು ಕೋರಿ ಸುಪ್ರೀಂಗೆ ಲಾಲೂಪ್ರಸಾದ್ ಅರ್ಜಿ

Update: 2019-02-21 18:05 GMT

 ಪಾಟ್ನ, ಫೆ.21: ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಅನಾರೋಗ್ಯದ ಕಾರಣದಿಂದ ಜಾಮೀನು ನೀಡಬೇಕೆಂದು ಕೋರಿ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ಜನವರಿಯಲ್ಲಿ ಲಾಲೂಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು. ದೇವ್‌ಗರ್ ಮತ್ತು ಚೈಬಾಸ ಖಜಾನೆ ಪ್ರಕರಣದಲ್ಲೂ ಲಾಲೂಪ್ರಸಾದ್‌ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

 ಮೇವು ಹಗರಣದಲ್ಲಿ ಲಾಲೂಪ್ರಸಾದ್ ದೋಷಿಯೆಂದು ವಿಶೇಷ ಸಿಬಿಐ ನ್ಯಾಯಾಲಯ 2017ರ ಡಿಸೆಂಬರ್‌ನಲ್ಲಿ ತೀರ್ಪಿತ್ತ ಬಳಿಕ ಲಾಲೂ ರಾಂಚಿ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಈ ಅವಧಿಯಲ್ಲಿ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್‌ನಲ್ಲಿ ಹಲವು ಬಾರಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮೇವು ಹಗರಣದಲ್ಲಿ ಲಾಲೂಪ್ರಸಾದ್‌ಗೆ 14 ವರ್ಷ ಜೈಲುಶಿಕ್ಷೆ ಮತ್ತು ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ 60 ಲಕ್ಷ ರೂ. ದಂಡ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News