ಚೀನಾ: ಮಾಜಿ ಸೇನಾಧಿಕಾರಿಗೆ ಜೀವಾವಧಿ ಶಿಕ್ಷೆ

Update: 2019-02-21 18:21 GMT

ಬೀಜಿಂಗ್, ಫೆ. 21: ಚೀನಾದ ಮಾಜಿ ಸೇನಾಧಿಕಾರಿಯೊಬ್ಬರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಮಾಜಿ ಮುಖ್ಯಸ್ಥ ಜನರಲ್ ಫಾಂಗ್ ಫೆಂಗ್‌ಹುಯಿ ಲಂಚ ತೆಗೆದುಕೊಂಡಿದ್ದಾರೆ ಹಾಗೂ ಭಾರೀ ಪ್ರಮಾಣದ ಅಕ್ರಮ ಸಂಪತ್ತನ್ನು ಕಲೆಹಾಕಿದ್ದಾರೆ ಎಂದು ಸೇನಾ ನ್ಯಾಯಾಲಯವೊಂದು ಈ ವಾರ ಘೋಷಿಸಿದೆ.

ಫಾಂಗ್, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಪ್ರಭಾವಿ ಸೆಂಟ್ರಲ್ ಮಿಲಿಟರಿ ಕಮಿಶನ್ (ಸಿಎಮ್‌ಸಿ)ನ ಸದಸ್ಯರೂ ಆಗಿದ್ದರು.

2017ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಮೊದಲ ಬಾರಿ ಭೇಟಿಯಾಗಿದ್ದಾಗ, 67 ವರ್ಷದ ಫಾಂಗ್ ಜಿನ್‌ಪಿಂಗ್ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News