ಭಯೋತ್ಪಾದಕರಿಗೆ ಧರ್ಮವಿದೆಯೇ?

Update: 2019-02-21 18:37 GMT

ಮಾನ್ಯರೇ,

ಜಗತ್ತಿನಲ್ಲಿ ಇರುವ ಯಾವ ಧರ್ಮಗಳು ಕೂಡಾ ಹಿಂಸೆ, ಗಲಭೆ, ದೌರ್ಜನ್ಯಗಳನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳ ಗ್ರಂಥಗಳು ಶಾಂತಿ, ಸಹೋದರತೆ, ಪ್ರೀತಿ, ಮಮತೆ, ತ್ಯಾಗ, ದಯೆ, ಇನ್ನಿತರ ಮಾನವೀಯ ಮೌಲ್ಯಗಳು ಒಳಗೊಂಡ ಒಳ್ಳೆಯ ವಿಷಯ ಗಳನ್ನೇ ಬೋಧಿಸುತ್ತವೆ. ಆದ್ದರಿಂದ ಇಲ್ಲಿ ಯಾವ ಧರ್ಮವು ಶ್ರೇಷ್ಠವಲ್ಲ ಯಾವ ಧರ್ಮವು ಕನಿಷ್ಠವಲ್ಲ. ಎಲ್ಲಾ ಧರ್ಮಗಳ ಆಚಾರ ವಿಚಾರ ಬೇರೆ ಬೇರೆಯಾದರೂ ಧ್ಯೇಯ ಒಂದೇ ಆಗಿದೆ. ನಮ್ಮ ಕೈಯಲ್ಲಿರುವ ಬೆರಳುಗಳು ಹೇಗೆ ಸಮಾನವಾಗಿರುವುದಿಲ್ಲವೊ ಹಾಗೆಯೇ ಎಲ್ಲಾ ಸಮುದಾಯ ಗಳಲ್ಲಿ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಹಾಗೆಂದ ಮಾತ್ರಕ್ಕೆ ಇಡೀ ಸಮುದಾಯವನ್ನು ದ್ವೇಷ ಭಾವನೆಯಿಂದ ಕಾಣುವುದು, ಅನುಮಾನದಿಂದ ನೋಡುವುದು ತಪ್ಪಾಗುತ್ತದೆ. ಕೆಲವು ಅವಿವೇಕಿಗಳು ‘‘ಉಗ್ರರೆಲ್ಲ ಮುಸ್ಲಿಮರೇ’’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿದ್ದಾರೆ. ಆದರೆ ಅಂತಹವರು ಈ ಕೆಳಗಿನ ಉದಾಹರಣೆಗಳನ್ನೂ ಗಮನಿಸಬೇಕಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರಾನಂತರ ನಡೆದ ಭಯೋತ್ಪಾದಕ ಕೃತ್ಯಗಳಾದ...
1) ಮಹಾತ್ಮಾ ಗಾಂಧೀಜಿಯವರ ಹತ್ಯೆ( ಮುಸ್ಲಿಮರಲ್ಲ)
2) ಇಂದಿರಾಗಾಂಧಿ ಹತ್ಯೆ (ಮುಸ್ಲಿಮರಲ್ಲ)
3) ರಾಜೀವ ಗಾಂಧಿ ಹತ್ಯೆ (ಮುಸ್ಲಿಮರಲ್ಲ)
4) ದಿಲ್ಲಿ ಸಿಖ್ಖರ ನರಮೇಧ (ಮುಸ್ಲಿಮರಲ್ಲ)
5) ಸಂಜೋತ ರೈಲು ಸ್ಫೋಟ (ಮುಸ್ಲಿಮರಲ್ಲ)
6) ಮಾಲೇಗಾಂವ್ ಸ್ಫೋಟ (ಮುಸ್ಲಿಮರಲ್ಲ)
7) ಹೈದರಾಬಾದಿನ ಮಕ್ಕಾ ಮಸೀದಿ ಸ್ಫೋಟ (ಮುಸ್ಲಿಮರಲ್ಲ)
8) ಪೊಲೀಸರೂ ಸೇರಿ ಹಲವರನ್ನು ಕೊಂದ ವೀರಪ್ಪನ್ (ಮುಸ್ಲಿಮನಲ್ಲ)
9) ಬೀದರ್‌ನಲ್ಲಿ 1992-93ರಲ್ಲಿ ಚಿತ್ರಮಂದಿರದಲ್ಲಿ ಸ್ಫೋಟ (ಮುಸ್ಲಿಮರಲ್ಲ)
10)ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು (ಮುಸ್ಲಿಮರಲ್ಲ)
11)ಬಿಜಾಪುರದಲ್ಲಿ ಬಸವೇಶ್ವರರವರ ಮೂರ್ತಿಗೆ ಅವಮಾನ ಮಾಡಿದವರು (ಮುಸ್ಲಿಮರಲ್ಲ)
12) ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ನಮ್ಮ ದೇಶದ ಸೈನ್ಯದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿ ಸಿಕ್ಕಿ ಬಿದ್ದವರು (ಮುಸ್ಲಿಮರಲ್ಲ)
13) ಉತ್ತರ ಪ್ರದೇಶದ ಬಧೋಹಿಯಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯ ಶಿರಚ್ಛೇದನ ಮಾಡಿದವರು (ಮುಸ್ಲಿಮರಲ್ಲ)
14) ಸರಕಾರಿ ಬ್ಯಾಂಕುಗಳ ಸಾವಿರಾರು ಕೋಟಿ ರೂ. ಲೂಟಿ ಮಾಡಿ ವಿದೇಶ ಸೇರಿದವರು (ಲಲಿತ್ ಮೋದಿ/ವಿಜಯಮಲ್ಯ/ನೀರವ್ ಮೋದಿ/ಭೂಪೇಶ್ ಜೈನ್) (ಯಾರೂ ಮುಸ್ಲಿಮರಲ್ಲ)
ಈಗ ಹೇಳಿ? ಭಯೋತ್ಪಾದನೆಗೆ ಯಾವುದೇ ಧರ್ಮ ಮತ್ತು ಜಾತಿಯ ಬಣ್ಣ ಇದೆಯೇ? ರಾಜಕೀಯ ಹಿತಾಸಕ್ತಿಗಾಗಿ ಹಿಂದೂ-ಮುಸ್ಲಿಂ ಸಹೋದರರಲ್ಲಿ ವಿಷ ಬೀಜ ಬಿತ್ತುವವರೇ ಇಲ್ಲಿ ನಿಜವಾದ ಭಯೋತ್ಪಾದಕರಾಗಿದ್ದಾರೆ.

Writer - -ಮೌಲಾಲಿ ಕೆ ಆಲಗೂರ, ಸಿಂದಗಿ

contributor

Editor - -ಮೌಲಾಲಿ ಕೆ ಆಲಗೂರ, ಸಿಂದಗಿ

contributor

Similar News