ಬೊಳ್ಳೂರು: ಫೆ. 23ರಂದು ರಿಫಾಯ್ಯೀಯ ದಫ್ ರಾತಿಬ್

Update: 2019-02-22 05:35 GMT

ಹಳೆಯಂಗಡಿ, ಫೆ. 22: ಮುಹೀಯ್ಯದ್ದಿನ್ ಜುಮಾ ಮಸೀದಿ ಬೊಳ್ಳೂರು ಇದರ ಅದೀನದಲ್ಲಿ ಕಾರ್ಯಾಚರಿಸುವ ಲಿಯಾವುಲ್ ಇಸ್ಲಾಮ್ ದಪ್ ಕಮೀಟಿ ಬೊಳ್ಳೂರು ಹಳೆಯಂಗಡಿ ಇದರ 36ನೇ ವಾರ್ಷಿಕ ರಿಫಾಯ್ಯೀಯ ದಫ್ ರಾತಿಬ್ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವು ಫೆ.23ರಂದು ರಾತ್ರಿ 8 ಗಂಟೆಗೆ ಬೊಳ್ಳೂರು ಮಸೀದಿ ವಠಾರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಳ್ಳೂರು ಮಸೀದಿ ಖತೀಬ್ ಅಲ್ ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ವಹಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ,ನಿಲೇಶ್ವರ್ ಖಾಝಿಯೂ ಆದ ಇ.ಕೆ  ಮುಹಮ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿರುವರು.

ಕೊಝಿಕ್ಕೋಡ್ ಖಾಝಿಯೂ, ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಉಪಾಧ್ಯಕ್ಷರೂ ಆದ ಬಹು ಅಸೆಯ್ಯಿದ್ ಮುಹಮ್ಮದ್ ಕೋಯ ಜಮಾಲುಲೈಲಿ ತಂಙಳ್ ದುಆ ಆಶಿರ್ವಚನ ನೀಡಲಿದ್ದು, ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣ ನಡೆಸಲಿರುವ ಈ ಕಾರ್ಯಕ್ರಮದಲ್ಲಿ ಇನ್ನಿತರ ಉಲಮಾ, ಉಮರ ನಾಯಕರು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News