ಗಂಗೊಳ್ಳಿ: ಫೆ. 23ರಂದು ‘ನಮ್ಮ ನಡಿಗೆ ಮಾದಕ ಮುಕ್ತ ಸಮಾಜದೆಡೆಗೆ’ ರ್ಯಾಲಿ

Update: 2019-02-22 12:41 GMT

ಕುಂದಾಪುರ, ಫೆ. 22: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಕೋಸ್ಟಲ್ ಮಿರರ್ ಮೀಡಿಯಾ ಇವುಗಳ ಸಹಯೋಗದೊಂದಿಗೆ ‘ನಮ್ಮ ನಡಿಗೆ ಮಾದಕ ಮುಕ್ತ ಸಮಾಜದೆಡೆಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಕಾಲ್ನಡಿಗೆ ಜಾಥ ಮತ್ತು ಸಾರ್ವ ಜನಿಕ ಸಭೆಯನ್ನು ಗಂಗೊಳ್ಳಿಯಲ್ಲಿ ಫೆ.23ರಂದು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9.30ಕ್ಕೆ ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಆವರಣ ದಲ್ಲಿ ಕಾಲ್ನಡಿಗೆ ಜಾಥವನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪನಾಯ್ಕ್ ಉದ್ಘಾಟಿಸಲಿದ್ದು, ನಂತರ ಜಾಥವು ನಗರದ ರಸ್ತೆಯಲ್ಲಿ ಸಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಮಾಪ್ತಿಗೊಳ್ಳ ಲಿದೆ. ಗಂಗೊಳ್ಳಿಯ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿರುವರು ಎಂದು ಎಸ್‌ಐಓ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಳಿಕ ಅಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಕುಂದಾಪುರದ ಡಿವೈಎಸ್ಪಿ ಪಿ.ಬಿ.ದಿನೇಶ್ ಕುಮಾರ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತ ಎಂ.ಸಿ. ವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಎಸ್‌ಐಓ ಜಿಲ್ಲಾ ಸಂಚಾಲಕ ಅಫ್ವಾನ್ ಹೂಡೆ, ಕೋಸ್ಟಲ್ ಮಿರರ್ ಮೀಡಿಯಾದ ಪ್ರಶಾಂತ್ ಮೊಗವೀರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News